ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರಿಂದ ಶ್ರಮದಾನ- ಸ್ವಚ್ಚತೆ

0

ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಅಂಗನವಾಡಿ ಕೇಂದ್ರದ ವಠಾರದಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳ ನಾಟಿಯನ್ನು ಅ.10ರಂದು ಶ್ರಮದಾನದ ಮೂಲಕ ಮಾಡಿದರು.

ಅಲ್ಲದೆ ಅಂಗನವಾಡಿಯ ಸುತ್ತ ಮುತ್ತ ಇರುವ ಗಿಡ ಬಳ್ಳಿಗಳನ್ನು ತೆಗೆಯುವ ಮೂಲಕ ಸ್ವಚ್ಛಗೊಳಿಸಲಾಯಿತು. ಬೆಟ್ಟoಪಾಡಿ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಮೊಯಿದು ಕುಂಞ, ಮಹಾಲಿಂಗ ನಾಯ್ಕ, ಲಲಿತಾ ಚಿದಾನಂದ, ಸುಮಲತಾ ಉಪಸ್ಥಿತರಿದ್ದು ಘಟಕದ ಈ ಸೇವೆಯನ್ನು ಪ್ರಶಂಸಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ಮತ್ತು ಅಂಗನವಾಡಿ ಸಹಾಯಕಿ ಧನ್ಯಶ್ರೀ ನಿಮ್ಮ ಈ ಸೇವೆ ನಮಗೆ ತುಂಬಾ ಸಂತಸ ತಂದಿದೆ. ಇನ್ನು ಮುಂದೆಯೂ ನಿಮ್ಮ ಸಹಕಾರ ಇರಲಿ ಎಂದು ಹೇಳಿ ಶುಭ ಹಾರೈಸಿದರು. ಬಾಲ ವಿಕಾಸ ಸಮಿತಿ ಸದಸ್ಯರು, ಶಾಲಾ ಪೋಷಕರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಆನಂದ, ಸಂಯೋಜಕಿ ಪದ್ಮಾವತಿ ಡಿ, ಸದಸ್ಯರಾದ ರವಿ ಕಟ್ಟಿಲ್ತಡ್ಕ, ಸತೀಶ.ಎಂ, ಹರಿಪ್ರಸಾದ್ ಸಿ.ಹೆಚ್, ಉಮೇಶ, ದಿನೇಶ, ಜಲಜಾಕ್ಷಿ, ಗೀತಾ, ಚಂದ್ರ, ಸುಬ್ರಹ್ಮಣ್ಯ, ಕೃಷ್ಣ ಶ್ರಮದಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here