ಕೊಂಬೆಟ್ಟು ವಿಷ್ಣು ನಿಲಯ ನಿವಾಸಿ ಬಿ.ಆರ್. ಕಡಂಬಳಿತ್ತಾಯ ನಿಧನ

0

ಪುತ್ತೂರು: ಕೊಂಬೆಟ್ಟು ವಿಷ್ಣು ನಿಲಯದ ನಿವಾಸಿ ಸುರತ್ಕಲ್ KREC ( N.I.T.K.) ಯ ನಿವೃತ್ತ ಆಡಳಿತಾಧಿಕಾರಿ ಮತ್ತು ರಿಜಿಸ್ಟಾರ್ ಆಗಿದ್ದ ಬಿ.ರಾಧಾಕೃಷ್ಣ ಕಡಂಬಳಿತ್ತಾಯ (94ವ) ಅವರು ಅ.12ರಂದು ಮಂಗಳೂರಿನ ಸ್ವಗೃಹದಲ್ಲಿ ವಯೋಸಹಜ ನಿಧನರಾದರು. ಮೃತರು ಪುತ್ರರಾದ ಬಿ.ಹರೇಕೃಷ್ಣ, ಬಿ.ರಾಜೇಶ್ವರ, ಬಿ.ಪುಂಡರೀಕಾಕ್ಷ, ಬಿ.ವೆಂಕಟಕೃಷ್ಣ, ಮಗಳು ಕಮಲಾಕ್ಷಿ ಹಾಗೂ ಸೊಸೆಯಂದಿರು,ಅಳಿಯ, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಬಿ.ರಾಧಾಕೃಷ್ಣ ಕಡಂಬಳಿತ್ತಾಯ ಅವರು ಕೊಂಬೆಟ್ಟು ಸರಕಾರಿ ಹಿಂದಿನ ಜೂನಿಯರ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು. ಕಳೆದ ವರ್ಷ ಹಿರಿಯ ವಿದ್ಯಾರ್ಥಿಗಳಿಂದ ಜೀರ್ಣೋದ್ಧಾರವಾಗುವ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here