ಮೂಕಾಂಬಿಕಾ ನೃತ್ಯಾಂತರಂಗ 105ರ ಸರಣಿಯಲ್ಲಿ ಅಪೂರ್ವ ಗೌರಿ ದೇವಸ್ಯ ಅವರಿಂದ ನೃತ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆದ ನೃತ್ಯಾಂತರಂಗದ 105ನೇ ಸರಣಿ ಕಾರ್ಯಕ್ರಮದಲ್ಲಿ ಕಾವು ಶಾಖೆಯ ನೃತ್ಯ ಶಿಕ್ಷಕಿ ಅಪೂರ್ವ ಗೌರಿ ಅವರಿಂದ ಭರತನಾಟ್ಯ ಪ್ರಸ್ತುತಿ ನಡೆಯಿತು.


ಕಾರ್ಯಕ್ರಮದಲಿ ವಿದ್ಯಾಶ್ರೀ ರಾಧಾಕೃಷ್ಣ ಅಭ್ಯಾಗತರಾಗಿ ಭಾಗವಹಿಸಿದರು. ಪ್ರಣಮ್ಯ ಪ್ರಾರ್ಥಿಸಿದರು. ವಿದ್ವಾನ್ ಗಿರೀಶ್ ಕುಮಾರ್ ಶಂಖನಾದ, ವಿದುಷಿ ಪ್ರೀತಕಲಾ ಓಂಕಾರ ಮಾಡಿದರು. ಶೌರಿಕೃಷ್ಣ ಪಂಚಾಂಗ ಶ್ರವಣ ನಿರ್ವಹಿಸಿದರು. ಮಂದಿರಾ ಕಜೆ ಮತ್ತು ವಿಭಾಶ್ರೀ ಅಭ್ಯಾಗತರನ್ನು ಪರಿಚಯಿಸಿದರು. ಅಕ್ಷತಾ ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮದ ಒಟ್ಟು ನಿರ್ವಹಣೆ ಮಾಡಿದರು. ಹಿಮ್ಮೇಳದಲ್ಲಿ ವಿದ್ವಾನ್ ದೀಪಕ್ ಕುಮಾರ್ ನಟುವಾಂಗದಲ್ಲಿ ಮತ್ತು ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ಅವರು ಹಾಗು ಮೃದಂಗದಲ್ಲಿ ನಿತೇಶ್ ನೀಲೇಶ್ವರ, ಕೊಳಲುವಾದನದಲ್ಲಿ ಕೃಷ್ಣಗೋಪಾಲ್ ಪುಂಜಲಕಟ್ಟೆ ಸಹಕರಿಸಿದರು.

LEAVE A REPLY

Please enter your comment!
Please enter your name here