ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಯೋಧರಿಗೆ ಗೌರವಾರ್ಪಣಾ ಕಾರ್ಯಕ್ರಮ

0

ಪುತ್ತೂರು: ತಮ್ಮ ಪ್ರಾಣವನ್ನು ಒತ್ತೆಯಿಟ್ಟು ದೇಶ ರಕ್ಷಣೆ ಮಾಡುವ ಯೋಧರ ಸ್ಮರಣೆಯೊಂದಿಗೆ, ಅವರಿಗೆ ಗೌರವಾರ್ಪಣೆಯನ್ನು ಗೈಯುವ ಕಾರ್ಯಕ್ರಮವು ಅ.12ರಂದು ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ, ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಎಮ್. ಕೆ. ನಾರಾಯಣ ಭಟ್ ರವರು ಮಾತನಾಡುತ್ತಾ, ಭಾರತೀಯ ಸೇನೆಯಲ್ಲಿ ಕೆಲಸ ಮಾಡುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ನಮ್ಮ ದೇಶದ ಸೇನೆಯು ಬಲಿಷ್ಠವಾಗಿದೆ ಎಂದರು. ಬಳಿಕ, ಸೇನೆಯಲ್ಲಿರುವ ಅವಕಾಶಗಳು, ಅದರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ. ಕೆ ಯವರು, ದೇಶದ ರಕ್ಷಣೆಯಾದರೆ ಮಾತ್ರ ಪ್ರಜೆಗಳಿಗೆ ರಕ್ಷಣೆ ಒದಗುವುದು. ಆದುದರಿಂದ ರಾಷ್ಟ್ರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಮ್ಮನ್ನು ಕಾಯುವ ಯೋಧರು ಎಂದೆಂದಿಗೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವವರು. ಆದುದರಿಂದ, ನಾವೆಲ್ಲರೂ ದೇಶ ಸೇವೆಯ ಕೈಂಕಾರ್ಯಕ್ಕೆ ಬದ್ಧರಾಗೋಣ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ನುಡಿಗಳನ್ನಾಡಿದರು.

ಶಾಲಾ ಪ್ರಾಂಶುಪಾಲೆ ಸಿಂಧೂ. ವಿ. ಜಿ, ಉಪಪ್ರಾಂಶುಪಾಲೆ ಹೇಮಾವತಿ ಎಂ. ಎಸ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ವಿನಯ ಪ್ರಭು ಅವರ ಮಾರ್ಗದರ್ಶನದಲ್ಲಿ, ಧೃತಿ ಕಾರ್ಯಕ್ರಮವನ್ನು ನಿರೂಪಿಸಿ, ಮೇಧಾ ಸ್ವಾಗತಿಸಿದರು. ಸೃಷ್ಟಿ ಎಂ. ಅತಿಥಿಗಳ ಪರಿಚಯವನ್ನು ಮಾಡಿದರು ಹಾಗೂ ದೃಶ್ಯ ವಂದಿಸಿದರು.

LEAVE A REPLY

Please enter your comment!
Please enter your name here