ಪುತ್ತೂರು:ತುಮಕೂರಿನ ಗುಬ್ಬಿಯಲ್ಲಿ ನಡೆದ ಎಂಆರ್ಎಫ್ 4ನೇ ಸುತ್ತಿನ ನ್ಯಾಷನಲ್ ಚಾಂಪಿಯನ್ ಶಿಪ್ ಕೆ-1000 ರ್ಯಾಲಿಯ 400ಸಿಸಿ ವಿಭಾಗದಲ್ಲಿ ಬೊಳುವಾರು ಏಸ್ ಮೋಟಾರ್ಸ್ ಮ್ಹಾಲಕ ಆಕಾಶ್ ಐತ್ತಾಳ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ತುಮಕೂರು ಗುಬ್ಬಿಯ ಮೈನ್ಸ್ನ ಒರಟಾದ ರಸ್ತೆಯಲ್ಲಿ ನಡೆದ ರ್ಯಾಲಿಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಸುಮಾರು ನೂರಾರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಸ್ಕಿಡ್ ಆದ ಪರಿಣಾಮ ಅಲ್ಪ ಹಿನ್ನಡೆಯಿಂದಾಗಿ ದ್ವಿತೀಯ ಸ್ಥಾನಿಯಾಗಿರುವುದಾಗಿ ಆಕಾಶ್ ಐತಾಳ್ ತಿಳಿಸಿದ್ದಾರೆ.
ಕೊಯಂತ್ತೂರಿನಲ್ಲಿ ಜು.16ರಂದು ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ಬೈಕ್ ರ್ಯಾಲಿಯ 2 ನೇ ರನ್ನರ್ ಅಪ್, 2022ರ ನವಂಬರ್ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ನ್ಯಾಶಷನಲ್ ಸ್ಪ್ರಿಂಟ್ ರ್ಯಾಲಿಯಲ್ಲಿ ಆರು ವಿಭಾಗದಲ್ಲಿ ಚಾಂಪಿಯನ್ ಶಿಪ್ ಹಾಗೂ ಡಿಸೆಂಬರ್ನಲ್ಲಿ ಗೋವಾದಲ್ಲಿ ನಡೆದ ರ್ಯಾಲಿಯಲ್ಲಿಯೂ ನ್ಯಾಷನಲ್ ಚಾಂಪಿಯನ್ ಆಗಿದ್ದರು. ಫೆಬ್ರವರಿಯಲ್ಲಿ ಬೆಂಗಳೂರು- ಚಿತ್ರದುರ್ಗಾದ ಮಧ್ಯೆಯ 1250 ಕಿ.ಮೀ ದೂರದ ದಕ್ಷಿಣ್ ಡೇರ್ ಚಾಂಪಿಯನ್ ಶಿಪ್ ಬೈಕ್ ರ್ಯಾಲಿಯಲ್ಲಿ 400ಸಿಸಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೆ ಚಂಡೀಗಡದಲ್ಲಿ ನಡೆದ ಸಜೋಬಾ ಚಾಂಪಿಯನ್ ಶಿಪ್ ಬೈಕ್ ರ್ಯಾಲಿಯಲ್ಲಿ ವಿದೇಶಿ ಬೈಕ್ ವಿಭಾಗದಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅಲ್ಲದೆ ಚಿಕ್ಕಮಗಳೂರಿನಲ್ಲಿ ಆಗಸ್ಟ್ನಲ್ಲಿ ನಡೆದ ರಾಜ್ಯ ಮಟ್ಟದ ಕಾರ್ ರೇಸ್ನಲ್ಲಿ ತೃತೀಯ ಸ್ಥಾನಿಯಾಗಿದ್ದರು.