ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ “ಗ್ರೂಪ್‌ ಲರ್ನಿಂಗ್ ಸ್ಟ್ರಾಟಜೀಸ್‌ ಇನ್‌ ವೀವ್‌ ಆಫ್ ಎನ್‌ ಸಿ ಎಫ್‌ – 2023” ವಿಚಾರ ಸಂಕಿರಣ

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಪುತ್ತೂರು ಇದರ ಆಶ್ರಯದಲ್ಲಿ “ಗ್ರೂಪ್‌ ಲರ್ನಿಂಗ್ ಸ್ಟ್ರಾಟಜೀಸ್‌ ಇನ್‌ ವೀವ್‌ ಆಫ್ ಎನ್‌ ಸಿ ಎಫ್‌ – 2023” ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಅ.13ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ರಾಷ್ಟ್ರೀಯತೆಯ ಭಾವವನ್ನು ಬೆಳೆಸುವ ಕರ್ತವ್ಯ ಶಿಕ್ಷಕರದ್ದಾಗಿರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಸಂಚಾಲಕಿ ಗಂಗಮ್ಮ .ಹೆಚ್ .ಶಾಸ್ತ್ರಿ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಮಹತ್ವದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಮಂಗಳೂರಿನ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಓ.ಆರ್ ಪ್ರಕಾಶ್, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ನಾಯಕ್ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಬಿ.ಇಡಿ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳು ಹಾಗೂ ಉಪನ್ಯಾಸಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಗಳೂರು ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಓ. ಆರ್. ಪ್ರಕಾಶ್ ಅವರು ‘ಎ ಬರ್ಡ್ಸ್‌ ಐ ವೀವ್‌ ಆಫ್‌ ಎನ್‌ ಸಿ ಎಫ್-2022’ ಎಂಬ ವಿಷಯದ ಬಗ್ಗೆ, ಮಂಗಳೂರು ಸೈoಟ್ ಆನ್ಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಡಾ. ಫ್ಲಾಸಿ ಸಿ. ಆರ್. ಡಿಸೋಜ ‘ ಆಕ್ಟೀವ್‌ ಗ್ರೂಪ್‌ ಲರ್ನಿಂಗ್‌ ಸ್ಟ್ರಾಟಜೀಸ್‌ ಇನ್‌ ವೀವ್‌ ಆಫ್‌ ಎನ್‌ ಸಿ ಎಫ್- 2023’ ಎಂಬ ವಿಷಯದ ಬಗ್ಗೆ, ಮಂಗಳೂರು ಸೈoಟ್ ಆನ್ಸ್ ಕಾಲೇಜ್ ಆಫ್ ಎಜುಕೇಶನ್ ನ ನಿವೃತ್ತ ಪ್ರಾಧ್ಯಾಪಕಿ ಡಾ. ವಿಜಯಕುಮಾರಿ ಎಸ್. ನ್ ‘ಕೊಲಬ್ರೇಟಿವ್‌ ಲರ್ನಿಂಗ್ : ಎ ಕಂಸ್ಟ್ರಕ್ಟಿವಿಸ್ಟ್‌ ಪೆಡಗೊಜಿ ಟು ಡೆವಲಪ್‌ ಟ್ವೆಂಟಿಫಸ್ಟ್ ಸೆಂಚೂರಿ ಸ್ಕಿಲ್ಸ್’ ವಿಷಯದ ಕುರಿತು‌ ಉಪನ್ಯಾಸ ನೀಡಿದರು.

ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಸ್ವಾಗತಿಸಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅನುರಾಧ ವಂದಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ದೀಪ್ತಿ ಕೆ. ಹಾಗೂ ಯಶಸ್ವಿನಿ ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here