ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರ ಇದರ ಮಾಸಿಕ ಸಭೆ ಅ.14ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ವಿಮೆನ್ ಇಂಡಿಯಾ ಮೊವ್ ಮೆಂಟ್ ಪುತ್ತೂರು ತಾಲೂಕು ಅಧ್ಯಕ್ಷೆ ಝಾಹಿದ ಸಾಗರ್ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಜೊತೆ ಕಾರ್ಯದರ್ಶಿ ಫಾತಿಮಾ ನಿರ್ಮ, ಸದಸ್ಯರುಗಳಾದ ನಫೀಸ ಮಟ, ಫೌಸಿಯ,ನುಶ್ರಾತ್, ಮುಂತಾಜ್, ಸಫ್ರೀನಾ ಹಾಜರಿದ್ದರು. ವಿಮೆನ್ ಇಂಡಿಯಾ ಮೊವ್ ಮೆಂಟ್ ಪುತ್ತೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಸೌದ ಮಟ ಸ್ವಾಗತಿಸಿದರು. ಝರೀನ ವಂದಿಸಿದರು.