ಬಲ್ನಾಡು: ಶಾಸಕರಿಂದ ಗ್ರಾಮಸ್ಥರ ಅಹವಾಲು ಸ್ವೀಕಾರ, ಅಭಿನಂದನಾ ಕಾರ್ಯಕ್ರಮ

0

ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಜನತೆಗೆ ಮೋಸ ಮಾಡಿದ್ದೇ ವಿನಃ ನಯಾ ಪೈಸೆ ಉಪಕಾರ ಮಾಡಿಲ್ಲ: ಅಶೋಕ್ ರೈ


ಪುತ್ತೂರು: ಚುನಾವಣೆ ಬಂದರೆ ಸಾಕು ಹಿಂದುತ್ವದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡಿ ಗೆಲ್ಲುವ ಬಿಜೆಪಿ ಗೆದ್ದ ಬಳಿಕ ಜನರನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ, ಇಷ್ಟು ವರ್ಷ ಆಡಳಿತ ನಡೆಸಿದ ಬಿಜೆಪಿಯವರು ಬಡವರಿಗೆ ಪ್ರಯೋಜನವಾಗುವ ಯಾವುದೇ ಕೆಲಸವನ್ನು ಮಾಡಿಲ್ಲ, ಅವರು ಮಾಡುವುದೂ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಬಲ್ನಾಡು ಸ ಹಿ ಪ್ರಾ ಶಾಲೆಯಲ್ಲಿ ನಡೆದ ಗ್ರಾಮಸ್ಥರ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.


ನಾನು ಕೂಡಾ ಹಿಂದೆ ಬಿಜೆಪಿಯಲ್ಲೇ ಇದ್ದೆ, ಬಿಜೆಪಿಯರಿಗೆ ಬಡವರ ಕಷ್ಟ ಬೇಕಿಲ್ಲ ಅವರಿಗೆ ಚುನಾವಣೆಯಲ್ಲಿ ಗೆಲ್ಲಬೇಕು ಅಷ್ಟೆ ಅವರ ಅಜೆಂಡಾ ಗೆಲ್ಲಬೇಕಾದರೆ ಅವರಲ್ಲಿ ಅಭಿವೃದ್ದಿ ಅಜೆಂಡಾ ಇಲ್ಲ ಹಿಂದುತ್ವದ ಹೆಸರಿನಲ್ಲಿ ಜನತೆಗೆ ಮೋಸ ಮಾಡುವುದೇ ಅವರ ಕಾಯಕವಾಗಿದೆ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಳೆದ ಐದು ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ನಿಮಗೆ ಏನು ಕೊಟ್ಟಿದೆ ಎಂಬುದನ್ನು ಚಿಂತಿಸಿ , ಕೇಂದ್ರದಲ್ಲಿರುವ ಬಿಜೆಪಿ ಸರಕರ ಬೆಲೆ ಏರಿಕೆ ಮಾಡಿ ಜನರನ್ನು ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಹಾಗೆ ಮಾಡಿದ್ದೇ ಅವರ ಸಾಧನೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಇನ್ನು ಏನು ಕೊಡಬೇಕು?
ಉಚಿತ ಅಕ್ಕಿ, ಉಚಿತ ಬಸ್, ಉಚಿತ ಕರೆಂಟ್, ತಿಂಗಳಿಗೆ ಖಾತೆಗೆ ಎರಡು ಸಾವಿರ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಅವಿದ್ಯಾವಂತರಿಗೆ ಸ್ಟ್ರೈಫಂಡ್ ಎಲ್ಲವನ್ನೂ ನೀಡುತ್ತಿದೆ ಆದರೂ ಕೆಲವರು ಕಾಂಗ್ರೆಸ್ಸನ್ನು ದೂರುತ್ತಿದ್ದಾರೆ, ಕಾಂಗ್ರೆಸ್ ಜನತೆಗೆ ಇನ್ನೇನನ್ನು ಕೊಡಬೇಕು. ಕೊಡಬೇಕಾದ ಎಲ್ಲವನ್ನೂ ಕೊಟ್ಟಿದೆ, ಬಡವರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡಿದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ಕೊಡುಗೆಯನ್ನು ನೀಡಿದ ಯಾವುದಾದರೂ ಸರಕಾರ ಇದೆಯಾ ಎಂದು ಪ್ರಶ್ನಿಸಿದ ಶಾಸಕರು ಪ್ರತೀಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ. ದೇಶದಲ್ಲಿ ಬಡವ ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು. ಧರ್ಮದ ಹೆಸರಿನಲ್ಲಿ ದಂಗೆ ಎಬ್ಬಿಸುವ ಬಿಜೆಪಿಯಿಂದ ಅಭಿವೃದ್ದಿ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಎಲ್ಲರ ಖಾತೆಗೂ ಹಣ ಬಂದೇ ಬರುತ್ತದೆ
ಗೃಹಲಕ್ಷ್ಮಿ ಹಣ ತಾಂತ್ರಿಕ ದೋಷದಿಂದ ಕೆಲವರಿಗೆ ಬಂದಿಲ್ಲ, ಮುಂದಿನ ದಿನಗಳಲ್ಲಿ ಎಲ್ಲರ ಖಾತೆಗೂ ಹಣ ಜಮಾವಣೆಯಾಗಲಿದೆ. ಕಾಂಗ್ರೆಸ್ ಕೊಟ್ಟ ಮಾತನ್ನು ಎಂದಿಗೂ ಉಳಿಸುತ್ತದೆ, 15 ಲಕ್ಷ ಕೊಡುವುದಾಗಿ ಹೇಳಿದವರು ಇನ್ನೂ ಆ ಹಣ ಹಾಕಿಲ್ಲ ಈ ಬಗ್ಗೆ ಬಿಜೆಪಿಯವರು ಜನತೆಗೆ ಉತ್ತರವನ್ನು ಕೊಡಬೇಕು ಎಂದು ಹೇಳಿದರು.ಕ್ಷೇತ್ರದ ಯಾವುದೇ ಒಬ್ಬ ಪ್ರಜೆಗೂ ತೊಂದರೆಯಾದಲ್ಲಿ ನನ್ನ ಕಚೇರಿಗೆ ಬನ್ನಿ. ನಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಹೇಳಿದರು. ಬಿಜೆಪಿಯವರ ಕುತಂತ್ರಕ್ಕೆ ಯಾರೂ ಬಲಿಯಾಗದಿರಿ. ದೇಶದಲ್ಲಿ ಎಲ್ಲಾ ಧರ್ಮ, ಜಾತಿಯವರು ಒಂದೇ ತಾಯಿ ಮಕ್ಕಳಂತೆ ಬದುಕಿದರೆ ಮಾತ್ರ ಭಾರತ ವಿಶ್ವ ಗುರುವಾಗಲು ಸಾಧ್ಯವಾಗುತ್ತದೆ. ಎಲ್ಲರೂ ಶಾಂತಿ ಸೌಹಾರ್ಧತೆಯಿಂದ ಬದುಕುವ ವಾತಾವರಣವನ್ನು ಕಾಂಗ್ರೆಸ್ ಸರಕಾರ ಮಾಡಲಿದೆ ಎಂದು ಹೇಳಿದರು.


ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ರಾಜ್ಯದಲ್ಲಿ ಸಮರ್ಥ ಸರಕಾರವಿದೆ, ಪುತ್ತೂರಿನಲ್ಲಿ ಸಮರ್ಥ ಶಾಸಕರಿದ್ದಾರೆ. ಬಡವರ ನೋವಿಗೆ ಸ್ಪಂದಿಸುವ ಶಾಸಕರ ಮನೋಭಾವ ಇಲ್ಲಿನ ಬಡವರಿಗೆ ಧೈರ್ಯ ತಂದಿದೆ . ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷಪ್ರವೀಣ್ ಚಂದ್ರ ಆಳ್ವ ಮಾತನಾಡಿ ಕ್ಷೇತ್ರದಲ್ಲಿ ಪಕ್ಷ ಬೇದ ಮರೆತು ಎಲ್ಲರಿಗೂ ಸಹಾಯ ಮಾಡುವ ಶಾಸಕರ ಗುಣ ಎಲ್ಲರೂ ಮೆಚ್ಚುವಂತದ್ದು. ಚುನಾವಣೆ ಮುಗಿಯುವ ತನಕ ಮಾತ್ರ ರಾಜಕೀಯ ಆ ಬಳಿಕ ಯಾವುದೇ ರಾಜಕೀಯ ಮಾಡಬಾರದು ಎಂಬುದು ಕಾಂಗ್ರೆಸ್ ಸಿದ್ದಾಂತವಾಗಿದೆ ಎಂದು ಹೇಳಿದರು.

ಮಾಜಿ ಬ್ಲಾಕ್ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಪ್ರಕಾಶ್ ಚಂದ್ರ ಆಳ್ವ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಉಪಾಧ್ಯಕ್ಷಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡ ಅಶ್ರಫ್ ಬಸ್ತಿಕಾರ್, ವಿಟ್ಲ ಉಪ್ಪಿನಂಗಡಿ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ವಿಟ್ಲ ಬ್ಲಾಕ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ರೋಯಲ್, ಕಾಲೇಜಿಉ ಕಾರ್ಯಾಧ್ಯಕ್ಷ ಪ್ರಕಾಶ್ ಚಂದ್ರ ಆಳ್ವ, ಕೆ ಬಿ ಅಶ್ರಫ್, ಬಲ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಚಂದಪ್ಪ ಪೂಜಾರಿ, ಬಲ್ನಾಡು ಗ್ರಾಪಂ ಸದಸ್ಯೆಯರಾದ ವಿನಯಾ ವಸಂತ, ಚಂದ್ರಾವತಿ, ಬಂಟ್ರೋಸ್ ಡಿಸೋಜಾ, ಬಲ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಗೌಡ, ಉಪಾಧ್ಯಕ್ಷ ಹಕೀಂ, ಸದಸ್ಯರುಗಳಾದ ನವೀನ್ ಕರ್ಕೆರಾ, ಸುಖವಾಣಿ, ಪ್ರಮೋದ್, ಸೀತಾರಾಮ, ನ್ಯಾಯವಾದಿ ಅರುಣಾ ರೈ, ಸೌಜನ್ಯಾ ಯುವಕಮಂಡಲದ ಅಧ್ಯಕ್ಷ ಹಮೀದ್, ನಗರಸಭಾ ಸದಸ್ಯ ರಿಯಾಝ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ನಾರಾಯಣ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here