ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ಉಳ್ಳಾಕುಲು ದೈವಸ್ಥಾನ ಮತ್ತು ಶ್ರೀ ರಾಜನ್ ದೈವಸ್ಥಾನದಲ್ಲಿ ಶ್ರೀ ರಾಜನ್ ದೈವಕ್ಕೆ ಪುದ್ವಾರ್ ಮೆಚ್ಚಿ ಕಾರ್ಯಕ್ರಮ ಅ.17ರಂದು ಬೆಳಗ್ಗೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ನಡೆಯಿತು. ಪೂಮಾಣಿ-ಕಿನ್ನಿಮಾಣಿ(ಉಳ್ಳಾಕುಲು) ದೈವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣಪತಿ ಹೋಮ ನೆರವೇರಿತು. ಬಳಿಕ ಪೂಮಾಣಿ-ಕಿನ್ನಿಮಾಣಿ ಹಾಗೂ ರಾಜನ್ ದೈವಗಳಿಗೆ ಸಂಕ್ರಮಣ ತಂಬಿಲ ಸೇವೆ ನಡೆಯಿತು. 11 ಗಂಟೆಯಿಂದ ಶ್ರೀ ರಾಜನ್(ವ್ಯಾಘ್ರ ಚಾಮುಂಡಿ) ದೈವಸ್ಥಾನದಲ್ಲಿ ಶ್ರೀ ರಾಜನ್ ದೈವಕ್ಕೆ ನವಾನ ಪುದ್ವಾರ್ ಮೆಚ್ಚಿ ನೇಮ ಜರುಗಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ರವಿರಾಜ ರೈ ಸಜಂಕಾಡಿ, ದಯಾ ವಿ ರೈ ಬೆಳ್ಳಿಪ್ಪಾಡಿ, ಶಶಿಧರ ರೈ ಕುತ್ಯಾಳ, ವಿಶ್ವನಾಥ ಪೂಜಾರಿ ಪೂಜಾರಿ ಮೂಲೆ, ಶ್ರೀಧರ ನೆರ್ಲಂಪಾಡಿ, ಶ್ರೀ ಕೂೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ರೈ ಕೆಳಗಿನ ಪೇರಾಲು, ಪ್ರಗತಿಪರ ಕೃಷಿಕ ಜಯಂತ ರೈ ಕುದ್ಕಾಡಿ, ಕೃಷ್ಣ ರೈ ಕುದ್ಕಾಡಿ, ಕೃಷಪ್ರಸಾದ್ ಬೆಳ್ಳಿಪ್ಪಾಡಿ, ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲು ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.