ಉಪ್ಪಿನಂಗಡಿ ಕಾಲೇಜಿನಲ್ಲಿ ಗಾಂಧಿ ಬಗೆಗಿನ ವಿಶೇಷ ಉಪನ್ಯಾಸ

0

ಗಾಂಧಿ ಬದುಕು ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡು ಬಳಕೆಯಾಗುತ್ತಿದ್ದು ಅವರನ್ನು ಆದರ್ಶವಾಗಿ ಪರಿಗಣಿಸುವುದರ ಜೊತೆಗೆ ಅಪಹಾಸ್ಯ ಮಾಡುತ್ತಿರುವುದು ಖೇದಕರ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಶೇಖರ ಎಂ.ಬಿ. ಹೇಳಿದರು. ಇವರು ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು,ಯುವ ರೆಡ್ ಕ್ರಾಸ್ ಘಟಕ ಮತ್ತು ಸಾಂಸ್ಕೃತಿಕ ಸಂಘಗಳು ಆಯೋಜಿಸಿದ್ದ ಗಾಂಧಿ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗಾಂಧಿ ಬದುಕು ಅಧ್ಯಯನ ಮಾಡಬೇಕು. ಅವರ ಬದುಕಿನ ಪ್ರತಿ ಹಂತಗಳೂ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ ಹೇಳಿದರು.
ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾಗಿರುವ ಡಾ. ಹರಿಪ್ರಸಾದ್ ಎಸ್ ಹಾಗೂ ಕೇಶವ್ ಕುಮಾರ್ ಅವರು ಉಪಸ್ಥಿತರಿದ್ದರು. ಹಾಗೂ ಕಾಲೇಜಿನ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗಾಂಧಿ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದ ಜೊತೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಯುವ ರೆಡ್ ಕ್ರಾಸ್ ಘಟಕ ಮತ್ತು ಸಾಂಸ್ಕೃತಿಕ ಸಂಘಗಳು, ನೇತ್ರಾವತಿ ಆಟೋ ಚಾಲಕಮಾಲಕರ ಸಂಘ ಉಪ್ಪಿನಂಗಡಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಪ್ಪಿನಂಗಡಿಯ ಜಂಟಿ ಆಶ್ರಯದ ಮೇರೆಗೆ "ಡ್ರಗ್ಸ್ ಮುಕ್ತ ಗ್ರಾಮ" ಜನಜಾಗೃತಿ ಅಭಿಯಾನದ ಭಾಗವಾಗಿ ಜಾಥ ನಡೆಸಲಾಯಿತು. ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್‌ ಎಸ್ ಸ್ವಾಗತಿಸಿದರು. ಘಟಕ ನಾಯಕಿಯಾದ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here