108 ಆರೋಗ್ಯ ಕವಚದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

0

ಆಲಂಕಾರು: ಆರೋಗ್ಯ ಕವಚ 108ರಲ್ಲಿ ಅ.17ರಂದು ಸಂಜೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಪೆರಿಯಡ್ಕದ ಶಾಲಿನಿ ಎಂಬ ಮಹಿಳೆಗೆ ನೋವು ಕಾಣಿಸಿಕೊಂಡಿದ್ದು 108 ಆರೋಗ್ಯ ಕವಚಕ್ಕೆ ಕರೆ ಮಾಡಿದ್ದಾರೆ. ಕರೆ ಆಲಿಸಿದ ಆಲಂಕಾರು 108 ಆರೋಗ್ಯ ಕವಚ ಸಿಬ್ಬಂದಿ ಆಂಬುಲೆನ್ಸ್‌ ನೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಉಪ್ಪಿನಂಗಡಿ ಆಸ್ಪತ್ರೆಗೆ ಕರೆ ತರುವ ಮುನ್ನವೇ ಶಾಲಿನಿ ಆಂಬ್ಯುಲೆನ್ಸ್‌ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 108ರ ಸ್ಟಾಫ್ ನರ್ಸ್ ಚಂದ್ರಶೇಖರ್ ನೆಕ್ಕಿಲಾಡಿ ಮಹಿಳೆಗೆ ಹೆರಿಗೆ ಸುಲಭ ಹೆರಿಗೆ ಮಾಡಿಸಿದ್ದು, ಚಾಲಕ ಪುರುಷೋತ್ತಮ ಸಹಕರಿಸಿದರು. ಬಳಿಕ ತಾಯಿ ಮಗುವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ತಾಯಿ, ಮಗು ಆರೋಗ್ಯವಾಗಿದ್ದಾರೆ.

LEAVE A REPLY

Please enter your comment!
Please enter your name here