ಪುತ್ತೂರು: ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ ಅಂಧಕಾರ, ಅಕ್ರಮ,ಅನ್ಯಾಯ ತುಂಬಿದ್ದ ಸಮಾಜವನ್ನು ಸುಸಂಸ್ಕೃತ ಮತ್ತು ಮಾದರಿ ಯೋಗ್ಯ ಸಮಾಜವಾಗಿ ಮಾರ್ಪಾಡುಗೊಳಿಸುವಲ್ಲಿ ಪುಣ್ಯ ಪ್ರವಾದಿ ಮುಹಮ್ಮದ್ ಪೈಗಂಬರರ ತ್ಯಾಗ ಮತ್ತು ಬೋಧನೆ ಬಹಳ ಪ್ರಶಂಸನೀಯವಾಗಿದೆ ಎಂದು ಪುತ್ತೂರು ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಅವರು ಹೇಳಿದರು.
ಅವರು ಅ.16ರಂದು ದರ್ಬೆ ಮುಹಮ್ಮದೀಯ ಮಸೀದಿ ಮತ್ತು ಮದ್ರಸದ ಹಾಗೂ ಮಹಮ್ಮದಿಯಾ ಯಂಗ್ಮೆನ್ಸ್ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ನಡೆದ ’ಬ್ರೈಟ್ ಆಫ್ ತ್ವೈಬಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಅಝಾದ್ ಅವರು ವಹಿಸಿದ್ದರು. ಮಸೀದಿಯ ಎಲ್ಲಾ ಕಾರ್ಯದಲ್ಲಿ ಸಹಕರಿಸುತ್ತಿದ್ದ ದಿ. ಹಾರಿಸ್ ಹಾಜಿಯನ್ನು ಸ್ಮರಿಸಿ ಅವರಿಗೆ ಮತ್ತು ಅವರ ತಂದೆ ದಿ.ಅಬ್ದುಲ್ಲಾ ಹಾಜಿಗೆ ಪ್ರಾರ್ಥನೆ ಸಲ್ಲಿಸಿದರು .ಅರ್ಷದ್ ದರ್ಬೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ಇಬ್ರಾಹಿಂ ಹಾಜಿ ತಿಂಗಳಾಡಿ, ಡಾ.ಶರಫ್ರಾಝ್, ಶಮೀರ್ ಪ್ರಕಾಶ್ ಫೂಟ್ವೇರ್, ಝಕರಿಯಾ ಬುರೈದಾ, ಅಬ್ದುಲ್ ರಝಾಕ್ ಸೌದಿ ಅರೇಬಿಯಾ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಖತೀಬ್ ಅಬ್ದುಲ್ ಕರೀಂ ದಾರಿಮಿ ಸ್ವಾಗತಿಸಿದರು.ಅಬ್ದುಲ್ ಅಝೀಝ್ ದರ್ಬೆ, ಹಸೈನಾರ್ ದರ್ಬೆ, ಬಶೀರ್ ಹಾಜಿ ದರ್ಬೆ ಅಲಿ ಕುಕ್ಕುವಳ್ಳಿ, ಅಝೀಝ್ ಹಾಜಿ ಮೊಟ್ಟೆತ್ತಡ್ಕ,ಹನೀಫ್ ನಂದಿನಿ,ಯಹ್ಯಾ ನಂದಿನಿ,ಅಲಿ ಸಾಮೆತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು . ನೌಶಾದ್ ಯಮಾನಿ ಕಾರ್ಯಕ್ರಮ ನಿರ್ವಹಿಸಿದರು.