ಕೃಷಿ, ಕೃಷಿಕರ ಮಹತ್ವ ಅರಿಯುವ ಅಗತ್ಯವಿದೆ- ರಾಕೇಶ್ ರೈ ಕೆಡೆಂಜಿ
ಕಾಣಿಯೂರು: ಆಧುನಿಕ ಕಾಲಘಟ್ಟದಲ್ಲಿ ಕೃಷಿ, ಕೃಷಿಕರ ಮಹತ್ವ ಅರಿಯುವ ಅಗತ್ಯವಿದೆ ಹಾಗೂ ಇರುವ ಒಂದು ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡಂಜಿ ಹೇಳಿದರು. ಅವರು ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಎನ್ ಎಸ್ ಎಸ್ ಸಹಯೋಗದಲ್ಲಿ ಕಾಣಿಯೂರು ಮಠದ ಗದ್ದೆಯಲ್ಲಿ ಅ.18ರಂದು ಕೆಸರ್ ಡ್ ಒಂಜಿ ದಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಭಟ್ ಪಿ ಅಧ್ಯಕ್ಷತೆ ವಹಿಸಿದ್ದರು.
ಜನಾರ್ಧನ ಪೆರ್ಲೊಡಿ ಮತ್ತು ಬಾಲಕೃಷ್ಣ ಗೌಡ ಕೋಳಿಗದ್ದೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಎನ್ ಎಸ್ ಎಸ್ ಸಂಚಾಲಕರಾದ ಶರಂಜಿತ್ ಪಿ.ಜೆ ಮತ್ತು ಶಾಂತಿ ಕೆ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಶ್ಮಿ ತೃತೀಯ ಬಿಕಾಂ ಸ್ವಾಗತಿಸಿ, ಕಾರ್ತಿಕ ವಂದಿಸಿದರು. ಕೀರ್ತನ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.