ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ಜಿಲ್ಲಾ ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ, ತಾಲೂಕು ಪಂಚಾಯತ್ ಪುತ್ತೂರು, ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ – ಗ್ರಾಮ ಪಂಚಾಯತ್ ಮುಂಡೂರು ಹಾಗೂ ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮುಂಡೂರು ಇದರ ಸಹಭಾಗಿತ್ವದಲ್ಲಿ ಮುಂಡೂರು ಗ್ರಾಮ ಪಂಚಾಯತ್ ವಠಾರದಲ್ಲಿ ಗ್ರಾಮೀಣ ರೈತ ಸಂತೆ ಅ.19ರಂದು ನಡೆಯಿತು. ಉದ್ಘಾಟಿಸಿದ ಮುಂಡೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಚಂದ್ರಶೇಖರ ಎನ್ ಎಸ್ ಡಿ ಮಾತನಾಡಿ ಪ್ರತಿ ವಾರವೂ ಗ್ರಾಮೀಣ ರೈತ ಸಂತೆ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ ಕೆ, ಸದಸ್ಯರಾದ ಉಮೇಶ್ ಅಂಬಟ, ಕರುಣಾಕರ ಗೌಡ ಎಲಿಯ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, MBK ಆಗಿರುವ ಸವಿತಾ, LCRPಗಳಾಗಿರುವ ಭವಾನಿ ಹಾಗೂ ರಾಧಿಕಾ, BC ಆಗಿರುವ ಫಾತಿಮಾ, ಕೃಷಿ ಸಖಿ ಆಗಿರುವ ಸಂಗೀತ, ಘನ ತ್ಯಾಜ್ಯ ಘಟಕದ ಚಾಲಕರು ಆಗಿರುವ ವಾರಿಜ, ಘಟಕದ ವಿಲೇವಾರಿ ಜಯಮಾಲ ಹಾಗೂ ಲೀಲಾವತಿ, ಅಂಗನವಾಡಿ ಕಾರ್ಯಕರ್ತೆ ಧನ್ಯಶ್ರೀ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕೃಷಿ ಉದ್ಯೋಗ ಸಖಿ ಆಗಿರುವ ಚೈತ್ರ ಮಧುಚಂದ್ರ ಸ್ವಾಗತಿಸಿ ವಂದಿಸಿದರು.