ಕಡಬ: ಇಲ್ಲಿನ ಪಣೆಮಜಲು ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಹೊಸ್ತಾರೋಹಣ ಹಾಗೂ ಆಯುಧ ಪೂಜೆ ಕಾರ್ಯಕ್ರಮ ಅ.20ರಂದು ನಡೆಯಿತು.
ಪೂರ್ವಾಹ್ನ ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಮಹಾಪೂಜೆ ನಡೆದು ಆಯುಧಾ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆದು ಹೊಸ್ತಾರೋಹಣ(ಹೊಸ ಅಕ್ಕಿ ನೈವೇದ್ಯ) ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು, ಧಾರ್ಮಿಕ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಞಣ, ಉಪಾಧ್ಯಕ್ಷ ಚಿದಾನಂದ ಗೌಡ ದೇವುಪಾಲು, ಲಕ್ಷ್ಮಣ ಗೌಡ ಹರಿಹರ, ಕಾರ್ಯದರ್ಶಿ ಲೋಕೇಶ್ ಆರ್ತಿಲ, ಖಜಾಂಜಿ ಕೇಶವ ಗೌಡ ಪಣೆಮಜಲು, ಪ್ರಮುಖರಾದ ಚೆನ್ನಪ್ಪ ಗೌಡ ಕಜೆಮೂಲೆ ಚಂದ್ರಶೇಖರ ಗೌಡ ಕೋಡಿಬೈಲು ಸತೀಶ್ಚಂದ್ರ ಕೇವಲ, ನಿವೃತ್ತ ಬ್ಯಾಂಕ್ ಮ್ಯಾನೆಜರ್ ಪುಟ್ಟಣ್ಣ ಗೌಡ ಮಾಜಿ ಗ್ರಾ.ಪಂ. ಅಧ್ಯಕ್ಷೆ ನಿಲಾವತಿ ಶಿವರಾಮ, ನಿವೃತ್ತ ಶಿಕ್ಷಕ ಎಲ್ಯಣ್ಣ ಗೌಡ, ಗಿರಿಧರ ರೈ ಪಿಜಕಳ, ಕೆ.ವಿ. ಬಾಲಕೃಷ್ಣ ಕಲ್ಕಲ, ಮಾಧವ ಗೌಡ ಕಾಮದೇನು ಬೆಳ್ಳಾರೆ, ಗುಣಪಾಲ ಗೌಡ,ಹರೀಶ್ ಬೆದ್ರಾಜೆ, ತೀರ್ಥೇಶ್ ಅಮೈ, ಕೃಷ್ಣಪ್ಪ ಪೂಜಾರಿ ಬೈಲಂಗಡಿ, ದಯಾನಂದ ಗೌಡ ಆರಿಗ ಕಂಗುಳೆ, ಆನಂದ ಗೌಡ ಉಳಿಪ್ಪು, ಮಾಜಿ ಸೈನಿಕ ಸುಂದರ ಗೌಡ, ನಾರಾಯಣ ಆರಿಗ, ನವೀನ ಆರಿಗ ಸಮಿತಿ ಸದಸ್ಯರಾದ ನಾರಾಯಣ ಗೌಡ ಆರ್ತಿಲ, ಹರಿಪ್ರಸಾದ್ ಪಣೆಮಜಲು, ಜಗದೀಶ್ ಬದಿಬಾಗಿಲು, ದಾಮೋಧರ ಅಂಞಣ, ದಯಾನಂದ ಗೌಡ ಕಾಯರ್ಗ, ವೆಂಕಟ್ರಮಣ ಗೌಡ ಅಂಞಣ, ಲಿಂಗಪ್ಪ ಗೌಡ ಕೆರೆಮುದೇಲು, ಗಣೇಶ್ ಗೌಡ(ಗಂಗಾಧರ) ಪಣೆಮಜಲು, ನೇಮಣ್ಣ ಗೌಡ ನಡುವಾಲುನವರಾತ್ರಿ ಉತ್ಸವ ಸಮಿತಿ ಸದಸ್ಯರಾದ ವಿನಯ ಕೆರೆಮುದೇಲು, ಜನಾರ್ದನ ಗೌಡ ಮೆಕ್ಯಾನಿಕ್, ಶೇಖರ ಗೌಡ ಅಂಞಣ, ಸಂತೋಷ್ ಪಣೆಮಜಲು, ಲೋಕೇಶ್ ಪಣೆಮಜಲು, ಪವನ್ ಪಣೆಮಜಲು, ಶಶಿಧರ ಪಣೆಮಜಲು, ನಾರಾಯಣ ಗೌಡ ಪಣೆಮಜಲು, ಸುಂದರ ಗೌಡ ಆರ್ತಿಲ ಮೊದಲಾದವರು ಉಪಸ್ಥಿತರಿದ್ದರು.