ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಸ್ಪರ್ಧೆ – ಅಕ್ಷಯ ಕಾಲೇಜು ಚಾಂಪಿಯನ್

0

ಪುತ್ತೂರು: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಏರ್ಪಡಿಸಿದ “ಸಿರಿ ಕುರಲ್ ನೃತ್ಯ ನಾಟ್ಯ ಗಾನ ಸಂಭ್ರಮ 2023” ಸಾಂಸ್ಕೃತಿಕ ಸ್ಪರ್ಧೆ ಯಲ್ಲಿ ಸಂಪ್ಯ ಅಕ್ಷಯ ಕಾಲೇಜು ಚಾಂಪಿಯನ್ ಪಟ್ಟ ಮಡಿಗೇರಿಸಿಕೊಂಡು ಪ್ರಥಮ ಬಹುಮಾನವಾಗಿ 15,555 ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.
ರಾಷ್ಟ್ರ ಪ್ರೇಮ, ನೆಲಜಲ ಹೀಗೆ ಸಾಮಾಜಿಕ ಸಂದೇಶವನ್ನು ಸಾರುವ ವಿಷಯದ ಜೊತೆಗೆ ನೃತ್ಯ, ನಾಟ್ಯ, ಜನಪದ ಕುಣಿತ ಹಾಗೂ ಸಮೂಹ ಗಾಯನವನ್ನು ಒಳಗೊಂಡ 25 ನಿಮಿಷಗಳ ಕಾಲ ಪ್ರತಿ ತಂಡವು ಪ್ರಸ್ತುತಪಡಿಸಿದ್ದು, ಸುಮಾರು ಎಂಟು ಕಾಲೇಜುಗಳು ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಅಕ್ಷಯ ಕಾಲೇಜಿನ 95 ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು “ವಿಶ್ವಗುರು ಭಾರತ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಾತಂತ್ರ್ಯದಿನೋತ್ಸವ, ಭಾರತದ ಪರಂಪರೆ, ಶಿಕ್ಷಣ ಪದ್ಧತಿ, ಭಾರತದ ಜಾನಪದ ಜನಜೀವನ, ಭಾರತದ ವಸ್ತ್ರ ವೈಭವ,ದೇಶಕ್ಕಾಗಿ ಹೋರಾಡಿದ ವೀರ ಕಣ್ಮಣಿಗಳು, ದೇಶಭಕ್ತರು ಹಾಗೆ ವಿವಿಧ ಭಾರತೀಯ ಸಂಸ್ಕೃತಿಯ ಉಡುಪುಗಳ ಫ್ಯಾಷನ್ ಶೋ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿತು. ಭಾಗವಹಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲುರವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here