ನೆಟ್ಟಣ ಸೈಂಟ್ ಮೇರೀಸ್ ಚರ್ಚ್ ನಲ್ಲಿ ರಜತ ಮಹೋತ್ಸವ ಕಾರ್ಯಕ್ರಮ

0

ಧರ್ಮ ಗುರುಗಳಿಗೆ ಧಾರ್ಮಿಕ ಬೋಧನೆಯೊಂದಿಗೆ ಸಾಮಾಜಿಕ ಕಳಕಳಿ ಇರಬೇಕು : ರೆ.ಫಾ.ವರ್ಗಿಸ್ ಪುದಿಯೇಡತ್

ಧರ್ಮ ಗುರುಗಳು ಯಾವಾಗಲು ನಗುಮುಖದಿಂದ ಸಮಾಜದ ಜನರಿಗೆ ಒಳಿತನ್ನು ಬಯಸುವವರು ಆಗಿರಬೇಕು. ಧಾರ್ಮಿಕ ಬೋಧನೆಯೊಂದಿಗೆ ಸಾಮಾಜಿಕ ಕಳಕಳಿ ಇರಬೇಕು. ಕಾಳಜಿಯಿಂದ ಜನರ ಕ್ಷೇಮವನ್ನು ಬಯಸುವವರಾಗಿರಬೇಕು ಎಂದು ಕುಟ್ರುಪಾಡಿ ವಲಯದ ಮುಖ್ಯ ಧರ್ಮ ಗುರುಗಳಾದ ರೆ.ಫಾ. ವರ್ಗಿಸ್ ಪುದಿಯೇಡತ್ ಹೇಳಿದರು.


ಅವರು ಅ.21ರಂದು ನೆಟ್ಟಣದ ಸೈಂಟ್ ಮೇರೀಸ್ ಚರ್ಚ್ ನಲ್ಲಿ ನಡೆದ ಗುರು ದೀಕ್ಷೆಯ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.

ರಜತ ಮಹೋತ್ಸವ ಸಂಭ್ರಮದಲ್ಲಿ ಇರುವ ಗುರುಗಳು ಕಳೆದ 25 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯ ಬಗ್ಗೆ ಶ್ಲಾಘಿಸಿದರು. ಇನ್ನೂ ಹೆಚ್ಚು ಉತ್ಸಾಹದಿಂದ ಸೇವೆ ಮಾಡಲು ದೇವರು ಆಯುಷ್ಯ ನೀಡಲಿ ಎಂದವರು ಹೇಳಿದರು.

ಬೆಳಿಗ್ಗೆ ದಿವ್ಯ ಬಲಿ ಪೂಜೆ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು ಮುಖ್ಯ ಅತಿಥಿಗಳಾಗಿ ಸಿ ಎಂ.ಐ ಮೈಸೂರು ಸಂಟ್ ಪೌಲ್ ಪ್ರೋವಿಂಸಿನ ಪ್ರಾವಿನ್ಸಿಯಲ್ ರೆ.ಫಾ ಆಗಸ್ಟಿನ್ ಮತ್ತು ರೆ.ಫಾ ವರ್ಗಿಸ್ ಓ. ಐ. ಸಿ. ಶುಭ ಹಾರೈಸಿದರು. ಗುರುದೀಕ್ಷೆಯ ರಜತ ಮಹೋತ್ಸವ ಸಂಭ್ರಮದಲ್ಲಿ ಫಾ ಅಲೆಕ್ಸ್ ಒಟ್ಟಾಪ್ಲಕ್ಕಾಲ್, ಫಾ.ತೋಮಸ್ ಕಲಾಪುರಕ್ಕಾಲ್, ಫಾ.ಸಿಬಿಚ್ಚನ್ ಪೌಲ್ ಮರಂಗೋಲಿಲ್, ಫಾ.ಸೆಭಾಸ್ಟಿನ್ ಸಿ.ಕೆ, ಫಾ. ವರ್ಗೀಸ್ ಪೌಲ್ ಇವರನ್ನು ಚರ್ಚಿನ ಧರ್ಮಗುರು ರೆ.ಫಾ ಆದರ್ಶ್ ಜೋಸೆಫ್ ಸನ್ಮಾನಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು, ಧರ್ಮ ಭಗನಿಯರು, ಹಾಗೂ ಚರ್ಚಿನ ಸರ್ವ ಸದಸ್ಯರು ಭಾಗವಹಿಸಿದರು. ತ್ರೆಸ್ಯಾ ಪಿ. ಜೆ ಸ್ವಾಗತಿಸಿ, ಕುಮಾರಿ ಜೇಸ್ಮಿನ್ ವಂದಿಸಿದರು, ವಿಜೇಶ್ ಕೆ. ಜೆ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here