ಪುತ್ತೂರು: ಕಾರಣಿಕ ಕ್ಷೇತ್ರ ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಅ.22ರಂದು ವಿಶೇಷವಾಗಿ ಚಂಡಿಕಾಯಾಗವು ವೇ.ಮೂ ಶ್ರೀಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ನೆರವೇರಿತು.
ಬೆಳಿಗ್ಗೆ ಮಹಾಲಕ್ಷ್ಮೀಗೆ ನಿತ್ಯಪೂಜೆ ನಡೆದ ಬಳಿಕ ಗಣಪತಿ ಹೋಮ ನಡೆದು ನಂತರ ಚಂಡಿಕಾ ಯಾಗ ಪ್ರಾರಂಭಗೊಂಡಿತು. ಇದೇ ಸಂದರ್ಭದಲ್ಲಿ ಪದ್ಮನಾಭ ಅರಿಯಡ್ಕ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನೆರವೇರಿತು. ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಮಹಾಲಕ್ಷ್ಮೀ ದೇವಿಗೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸಂಜೆ ಬನ್ನೂರು ಸ್ಪೂರ್ತಿ ಯುವಕ, ಯುವತಿ ಮಂಡಲದವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.
ಸುದ್ದಿಯಲ್ಲಿ ನೇರಪ್ರಸಾರ:
ಕಾರ್ಯಕ್ರಮವು ಸುದ್ದಿ ಯೂಟ್ಯೂಬ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದರು.
.23ರಂದು ಆಯುಧ ಪೂಜೆ:
ಕ್ಷೇತ್ರದ ನವರಾತ್ರಿ ಉತ್ಸವದಲ್ಲಿ ಅ.23ರಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ವಿದ್ಯಾ ಸಾಗರ್ ಕಲಾ ಶಾಲೆ ಇವರಿಂದ ಭಜನೆ, ಮಹಾಪೂಜೆ, ಸಂಜೆ ಆಯುಧ ಪೂಜೆ, ಲಕ್ಷ್ಮೀದೇವಿ ಭಕ್ತದವರಿಂದ ಭಜನೆ, ಮಹಾಪೂಜೆ, ಅ.೨೪ರಂದು ಬೆಳಿಗ್ಗೆ ಬೆಂಗಳೂರು ಸದ್ದಿದ್ಯಾ ಸಂಗೀತಾಯದ ಎಲ್.ಆರ್ ವಿಜಯರಂಗ ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವಗಳು ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.