ಪುತ್ತೂರು: ಗಡಿನಾಡ ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏರ್ಪಡಿಸಿರುವ , ಭರವಸೆಯ ಬೆಳಕು- 2023 ಅಂತಾರಾಜ್ಯ ಯುವ ಪ್ರತಿಭಾ ಪ್ರಶಸ್ತಿಯನ್ನು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಶಿಲ್ಪಾ ಪಡೆದಿರುತ್ತಾಳೆ. ಈಕೆ ನಿಡ್ಪಳ್ಳಿ ಯ ಡೊಂಬಟೆಬರಿ ಚನಿಯಪ್ಪ ಮತ್ತು ಪ್ರೇಮ ದಂಪತಿ ಪುತ್ರಿ. ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ವಿದ್ಯಾರ್ಥಿವೇತನ, ಗ್ರಾಮೀಣ ವಿಜ್ಞಾನ ಮೇಳದ ಔಷಧೀಯ ಸಸ್ಯಗಳ ಗುರುತಿಸುವ ಸ್ಪರ್ಧೆ, ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ಕವನ ಸ್ಪರ್ಧೆ, ತಾಲೂಕು ಮಟ್ಟದ ಯವಜನೋತ್ಸವ, ನಾ ಕಂಡಂತೆ ಸಸ್ಯ ಜಾತ್ರೆಯ ಕವನ ಸ್ಪರ್ಧೆ, ಹಲಸು ಮೇಳದ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮುಂತಾದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು, ಬಹುಮಾನಗಳನ್ನು ಪಡೆದಿರುತ್ತಾಳೆ. ನವೋದಯ ಪ್ರೌಢಶಾಲಾ ಶಿಕ್ಷಕರೆಲ್ಲರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಈಕೆಯು ಸಾಧನೆಯನ್ನು ಮಾಡಿರುತ್ತಾಳೆ ಎಂದು ಮುಖ್ಯ ಗುರುಗಳು ತಿಳಿಸಿದ್ದಾರೆ.