ದೂಮಡ್ಕ-ವಡ್ಯ ರಸ್ತೆಯಲ್ಲಿ ಅಪಾಯಕಾರಿ ತಿರುವು, ಸ್ವಲ್ಪ ಮೈಮರೆತರೂ ಮರಳಿ ಬಾರದೂರಿಗೆ

0

ಸಂಬಂಧಿಸಿದವರು ಗಮನಹರಿಸಿ- ವಾಹನ ಚಾಲಕರ, ಸಾರ್ವಜನಿಕರ ಬೇಡಿಕೆ

ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ ವಡ್ಯ ರಾಸ್ತೆಯಲ್ಲಿರುವ ಅಪಾಯಕಾರಿ ತಿರುವು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಇರ್ದೆ-ದೂಮಡ್ಕ-ವಡ್ಯ ರಸ್ತೆಯು ದೂಮಡ್ಕ ಶಾಲೆಯಿಂದ 200ಮೀಟರ್ ದೂರದಲ್ಲಿ ಅಪಾಯಕಾರಿ ತಿರುವು ಹೊಂದಿದ್ದು ವಾಹನ ಸವಾರರಿಗೆ ಅಪಾಯ ಆಹ್ವಾನಿಸಿದೆ. ಈ ತಿರುವಿನ ಎದುರುಗಡೆ ಆಳವಾದ ಕಣಿವೆ ಇದ್ದು ಸವಾರರು ಜಾಗರೂಕತೆಯಿಂದ ಪ್ರಯಾಣಿಸಬೇಕಾಗಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಸು ಓಡಾಡುತ್ತಿದೆ. ಸಮೀಪದಲ್ಲೇ ಜನವಸತಿ ಮತ್ತು ಶಾಲೆ ಇರುತ್ತದೆ. ಈ ರಸ್ತೆ ಕೇರಳ ಮತ್ತು ಕರ್ನಾಟಕದ ಗಡಿಭಾಗದ ಜನರ ಸಂಪರ್ಕ ರಸ್ತೆಯಾಗಿದ್ದು ಇರ್ದೆ ಜಂಕ್ಷನ್‌ನಿಂದ ಕರ್ನಾಟಕ ಗಡಿಯವರೆಗೆ ಈ ರಸ್ತೆಯ ಅಗಲೀಕರಣ ಕಿರಿದಾಗಿದೆ. ಅಲ್ಲದೆ ರಸ್ತೆ ಕೂಡಾ ಹದೆಗೆಟ್ಟಿದ್ದು ವಾಹನ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ ಎಂದು ಈ ಭಾಗದ ವಾಹನ ಸವಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here