ಇಚ್ಲಂಪಾಡಿ-ನೇರ್ಲ ಶಾಲಾ ಹಳೆವಿದ್ಯಾರ್ಥಿ ಸಂಘ

0

ಅಧ್ಯಕ್ಷ: ತಿರುಮಲೇಶ್ವರ ಬಿಜೇರು , ಕಾರ್ಯದರ್ಶಿ: ದುರ್ಗಾಪ್ರಸಾದ್

ನೆಲ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ-ಇಚ್ಲಂಪಾಡಿ ಇದರ ಹಳೆ ವಿದ್ಯಾರ್ಥಿ ಸಂಘದ ಸಭೆಯು ಅ.29ರಂದು ಶಾಲೆಯಲ್ಲಿ ನಡೆಯಿತು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಕುಮಾರ್ ಬಿ.ಬದನೆ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಹಳೆವಿದ್ಯಾರ್ಥಿ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ತಿರುಮಲೇಶ್ವರ ಬಿಜೇರು, ಉಪಾಧ್ಯಕ್ಷರಾಗಿ ರೆಜಿ ಕಲ್ಲರ್ಬ, ಕಾರ್ಯದರ್ಶಿಯಾಗಿ ದುರ್ಗಾಪ್ರಸಾದ್ ಕಂಚಿನಡ್ಕ, ಕೋಶಾಧಿಕಾರಿಯಾಗಿ ಸಚಿನ್ ನೇರ್ಲ, ಗೌರವಾಧ್ಯಕ್ಷರಾಗಿ ಶಶಿಧರ ಪಿ. ಪೊಯ್ಯೆತ್ತಡ್ಡರವರು ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಸ್, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು, ಶಾಲಾ ಶಿಕ್ಷಕ ಗಿರೀಶ್ ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here