ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.21ರಂದು “ಶಾರದಾ ಪೂಜೆ ಹಾಗೂ ಆಯುಧ ಪೂಜೆ” ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮವು ಶಾರದಾ ಪೂಜೆಯೊಂದಿಗೆ ಆರಂಭಗೊಂಡು ಬಳಿಕ ಶ್ರೀ ನಂದಿಕೇಶವ ಭಜನಾ ಮಂಡಳಿ, ಬೆದ್ರಳ ಇವರಿಂದ ಕುಣಿತ ಭಜನೆಯು ನಡೆಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ಸವಣೂರು ವಿದ್ಯಾರಶ್ಮಿ ಶಾಲೆಯ ಪ್ರಾಂಶುಪಾಲ ಸೀತಾರಾಮ ಕೇವಲ ಸ್ವಾಗತವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಭಾರ ಪ್ರಾಂಶುಪಾಲ ಶ್ರೀನಿವಾಸ್ ಹೆಚ್.ಬಿ. ಆಗಮಿಸಿದರು. ಇವರಿಗೆ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಇವರು ಸ್ಮರಣಿಕೆ ನೀಡಿ ಗೌರವಿಸಿದರು. ಸಭೆಯಲ್ಲಿ ಎವಿಜಿ ಸಂಸ್ಥೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕ ಗೋವಿಂದ ಮೇಸ್ತ್ರಿ, ನಾರಾಯಣ ಗೌಡ , ವಿಶ್ವನಾಥ ಮತ್ತು ಕೃಷ್ಣಪ್ಪ ಮೇಸ್ತ್ರಿ ಇವರಿಗೆ ಎ ವಿಜಿ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಶ್ರೀನಿವಾಸ್ ಎಚ್ ಬಿ ಸನ್ಮಾನಿಸಿದರು.
ಸಂಸ್ಥೆಯ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ, ಪಿಟಿಎ ಅಧ್ಯಕ್ಷ ಗಣೇಶ್, ಎವಿಜಿ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಜನರಲ್ ಸೆಕ್ರೆಟರಿ ಆದ ಕೆ ವಿ ಉಪಾಧ್ಯಕ್ಷೆ ಕೆ ಬಿ ಪುಷ್ಪಾವತಿ ಕಳುವಾಜೆ, ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಜಯಪ್ರಕಾಶ್ ಕೆ ವಿ ಕಳುವಾ ಜೆ ಖಜಾಂಜಿ ವನಿತಾ ಇವಿ ನಿರ್ದೇಶಕ ಕೊರಗಪ್ಪ ಗೌಡ ನಿರ್ದೇಶಕ ಗಂಗಾಧರ ಗೌಡ ಅಲುಂಗುಡ, ಟಿಜಿ ದೀಕ್ಷಾ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಕೆ ವಿ ನಾರಾಯಣ, ಪೋಷಕ ವೃಂದದವರು, ಪುಟಾಣಿ ಮಕ್ಕಳು , ಡಿವಿಜಿ ಅಸೋಸಿಯೇಟ್ಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಇವರು ಅತಿಥಿ ಪರಿಚಯ ನಡೆಸಿಕೊಟ್ಟರು, ಸಂಸ್ಥೆಯ ಶಿಕ್ಷಕಿ ವನಿತಾ ಇವರು ಶ್ರೀ ನಂದಿಕೇಶ್ವರ ವಚನ ಮಂಡಳಿ ಬಿದ್ರಾಳ ಇವರ ಪರಿಚಯ ನೀಡಿದರು.ಗಾಂಧೀಜಿಯವರ ಜೀವನದ ಮಹತ್ವವನ್ನು ವಾಚಿಸಿದರು. ಸಂಸ್ಥೆಯ ನಿರ್ದೇಶಕಿ ಕೆ ವಿ ಪ್ರತಿಭಾ ದೇವಿ ವಂದಿಸಿದರು, ಸಂಸ್ಥೆಯ ಶಿಕ್ಷಕಿ ಯಶುಭ ರೈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.