ಪುತ್ತೂರು: ಕೌಡಿಚ್ಚಾರನಲ್ಲಿ ಮೆಸ್ಕಾಂ ಬಳಕೆದಾರರ ಸಭೆಯು ಅಧ್ಯಕ್ಷ ಎಸ್ ಅಬೂಬಕ್ಕರ್ ಕೌಡಿಚ್ಚಾರ್ ನೇತೃತ್ವದಲ್ಲಿ ಸಭೆಯು ನ.4ರಂದು ನಡೆಯಿತು.ಸಭೆಯಲ್ಲಿ ನಾಲ್ಕು ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಲ್ಲಿ ಕೌಡಿಚ್ಚಾರಿನ ಪರಿಸರದಲ್ಲಿ ಕೊರತೆಯಾಗಿದೆ.ಮತ್ತು ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೌಡಿಚ್ಚಾರಿನಲ್ಲಿ ಅಂಗಡಿ ವ್ಯಾಪಾರದವರಿಗೆ, ಹಾಲಿನ ವ್ಯಾಪರದವರಿಗೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಕೌಡಿಚ್ಚಾರು ಪ್ರದೇಶ ಕತ್ತಲಲ್ಲಿ ಇರಬಾರದು ಎಂದರು. ಕೌಡಿಚ್ಚಾರು ಪ್ರದೇಶಕ್ಕೆ ಒಂದು ಟೀಸಿ ಆಗಬೇಕಿದೆ.ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಸಹಾಯಕ ಕಾರ್ಯನಿರ್ವಾಹ ಅಭಿಯಂತರರಿಗೆ ಮನವಿ ನೀಡುವುದಾಗಿ ಈ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿದ್ಯುತ್ ಬಳಕೆದಾರ ಈ ಮೆಸ್ಕಾಂ ಬಳಕೆದಾರ ಸಭೆಯಲ್ಲಿ ಕಾರ್ಯದರ್ಶಿ ದೊರೈಸ್ವಾಮಿ ಕೌಡಿಚ್ಚಾರು, ಇಕ್ಬಾಲ್ ಹುಸೈನ್ ಕೌಡಿಚ್ಚಾರು, ಯಾಕುಬ್ ಕೌಡಿಚ್ಚಾರು, ರಿಕ್ಷಾ ಚಾಲಕ ಹರೀಶ್, ರಫೀಕ್ ಜಾರತ್ತೂರು, ರಘುನಾಥ ಕುಲಾಲ್, ಇನ್ನೀತರರು ಉಪಸ್ಥಿತರಿದ್ದರು.