ಬಡಗನ್ನೂರು ಗ್ರಾಮಾರಣ್ಯ ಸಮಿತಿ ಮಹಾಸಭೆ

0

ಬಡಗನ್ನೂರು: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಪುತ್ತೂರು ಉಪ ವಿಭಾಗ, ಪುತ್ತೂರು ವಲಯ, ಗ್ರಾಮ ಅರಣ್ಯ ಸಮಿತಿ ಬಡಗನ್ನೂರು ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಹೊಸ ನಿರ್ವಹಣಾ ಸಮಿತಿ ಆಯ್ಕೆ ಪ್ರಕ್ರಿಯೆ ನ.4 ರಂದು ಪಟ್ಟೆ ಬಡಗನ್ನೂರು ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ನಡೆಯಿತು.

ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮಾರಣ್ಯ ಸಮಿತಿ ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡುತ್ತಾ ಬರುತ್ತಿದೆ. ಅರಣ್ಯ ಇಲಾಖೆ ಅಡಿಯಲ್ಲಿ ಸ್ವಸಹಾಯ ಸಂಘವನ್ನು ರಚಿಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ ಇದು ಬಡವರ ಪಾಲಿಗೆ ಅಶಾದೀಪವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಹಳ್ಳಿಗಾಡಿನ ಜನರು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಗ್ರಾಮಾರಣ್ಯ ಸಮಿತಿ ಹುಟ್ಟು ಹಾಕಲಾಯಿತು. ಬಡಗನ್ನೂರು ಗ್ರಾಮಾರಣ್ಯ ಸಮಿತಿ ರಚನೆ ಸಂದರ್ಭದಲ್ಲಿ ಡಾ. ಬಾಲಕೃಷ್ಣ ಭಟ್ ಪಟ್ಟೆ ನೇತೃತ್ವದಲ್ಲಿ ಹಲವು ಮನೆಗೆ ಭೇಟಿ ನೀಡಿ ಸಮಿತಿ ರಚನೆ ಮಾಡಿದ್ದೇವೆ ಇಂದು ಅವರು ಸ್ಮರಿಸಬೇಕಾಗುತ್ತದೆ ಎಂದ ಅವರು ಗ್ರಾಮಾರಣ್ಯ ಸಮಿತಿ ರಾಜಕೀಯ ರಹಿತ ಸಂಘಟನೆ, ಸ್ವಸಹಾಯ ಸಂಘಗಳ ಮೂಲಕ ಸ್ವಾವಲಂಬಿ ಬದುಕಲು ದಾರಿಕೊಡುತ್ತಿದೆ. ಸ್ಪರ್ಧಾತ್ಮಕ ಈ  ಸಮಯದಲ್ಲಿಯೂ ಇಲಾಖೆ ಗ್ರಾಮಾರಣ್ಯ ಸಮಿತಿ ಅಡಿಯಲ್ಲಿ ರಚಿಸಿದ ಸ್ವ ಸಹಾಯ ಸಂಘಗಳಿಗೆ 4 ಶೇಕಡಾ ಬಡ್ಡಿಯಲ್ಲಿ ಸಾಲ ನೀಡುತ್ತಾ ಬರುತ್ತಿದ್ದು  ಪ್ರಾರಂಭದಲ್ಲಿ 1ಲಕ್ಷ ರೂಪಾಯಿ  ನೀಡುತ್ತಿತ್ತು ಅದು ಈಗ 5 ಲಕ್ಷ ರೂಪಾಯಿ ವರೆಗೆ ನೀಡಲಾಗುತ್ತಿದೆ. ಸಮಿತಿ ಸದಸ್ಯರಿಗೆ ಕಾನೂನಾತ್ಮಕವಾಗಿ ಯಾವುದೇ ವಿಷಯದ ಬಗ್ಗೆ ಅಧಿಕಾರಿಗಳಲ್ಲಿ ಮುಖಾತ ಅಥವಾ ಪೋನ್ ಮೂಲಕ ಮಾತಾಡಲು ಮಜುಗರ ಪಡುವ ಪ್ರಶ್ನೆಯೇ ಇಲ್ಲ , ಎಂದ ಅವರು ಗ್ರಾಮದ ಪರಿಸರ ಉಳಿಸಿಕೊಂಡು ಗ್ರಾಮದ ಅಭಿವೃದ್ಧಿ ಅಗಲಿ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ವಲಯ ಪುತ್ತೂರು, ವಲಯ ಅರಣ್ಯ ಅಧಿಕಾರಿ ಕಿರಣ್ ಬಿ. ಎಂ., ಮಾತನಾಡಿ, ಅರಣ್ಯಪ್ರದೇಶ ಅದಿವಾಸಿ ಜನಾಂಗದವರ ಹಾಗೂ ಅಧಿಕಾರಿಗಳ ಬಾಂಧವ್ಯ ಹೆಚ್ಚಿಸ ಮುಖಾಂತರ ಹಳ್ಳಿಗಾಡಿನ  ಜನರು ಸ್ವಾವಲಂಬಿ ಜೀವನದ ಉದ್ದೇಶದಿಂದ ಗ್ರಾಮಾರಣ್ಯ ಸಮಿತಿ ರಚನೆ ಮಾಡಲಾಯಿತು .ಸ್ವಸಹಾಯ  ಸಂಘಗಳ ಮೂಲಕ ಸಾಲ ಪಡೆದು  ಮನೆಯಲ್ಲೇ ಸಣ್ಣ ಸಣ್ಣ ಉದ್ಯಮ ರಚಿಸಿ ಸ್ವಾವಲಂಬಿಯಾಗಿ ಜೀವನ ನಡೆಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ಎಂದು ಶುಭಹಾರೈಸಿದರು.

ಪಟ್ಟೆ ಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ  ರಾಜಗೋಪಾಲ ಎನ್‌, ಮಾತನಾಡಿ ಅರಣ್ಯ ನಮ್ಮ ಉಸಿರು ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಎಂದ ಅವರು ಶಾಲಾ ಪರಸ್ಪರದ ಸುತ್ತ ಹಣ್ಣಿನ ಗಿಡ, ಹಲಸು ಮಾವು ಗಿಡ ನೀಡುವಂತೆ ವಲಯ ಅರಣ್ಯಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡರು. ಗ್ರಾಮಾರಣ್ಯ ಸಮಿತಿ ಕಳೆದ 5 ವರ್ಷದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಿದೆ ಇನ್ನೂ ಮುಂದೆ ನೂತನ ಸಮಿತಿ ಇನ್ನಷ್ಟು ಹೆಚ್ಚು ಅಭಿವೃದ್ಧಿ ಕೆಲಸ ನಡೆಯಲಿ ಎಂದು ಶುಭಹಾರೈಸಿದರು.

ಸಭೆಯು ಬಡಗನ್ನೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ತಾಲೂಕು ಕಂದಾಯ ನಿರೀಕ್ಷರು ಗೋಪಾಲ ಚುನಾವಣಾಧಿಕಾರಿ ಭಾಗವಹಿಸಿ ನೂತನ ನಿರ್ವಹಣಾ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಪಾಣಾಜೆ ವಲಯ ಉಪ ಅರಣ್ಯಾಧಿಕಾರಿ ಪ್ರಕಾಶ್ ರೈ ಸ್ವಾಗತಿಸಿದರು. ಗಸ್ತು ಅರಣ್ಯ ಪಾಲಕ ಲಿಂಗರಾಜು ಗತಕಾಲದ ವರದಿ ಮಂಡಿಸಿ ವಂದಿಸಿದರು. ಗ್ರಾಮಾರಣ್ಯ ಸಮಿತಿ ಸದಸ್ಯ ಕೇಶವ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬೆಟ್ಟಂಪ್ಪಾಡಿ ಗಸ್ತು ಅರಣ್ಯ ಪಾಲಕ ಸುಧೀರ್ ಹೆಗ್ಗಡೆ, ನೆಟ್ಟಗೆ ಮೂಡ್ನೂರು ಗಸ್ತು ಅರಣ್ಯ ಪಾಲಕ ಉಮೇಶ್, ಅರಣ್ಯ ವೀಕ್ಷಕರಾದ, ದೇವಪ್ಪ ಅರಿಯಡ್ಕ, ವೆಂಕಪ್ಪ ಗೌಡ ಬಡಗನ್ನೂರು, ಹಾಗೂ ಚಾಲಕ ಜಗ್ಗದೀಶ್ ಸಹಕರಿಸಿದರು.

ಮುಡಿಪಿನಡ್ಕ ಶ್ರೀ ದೇಯಿಬೈದೇತಿ ಜೌಷಧಿಯ ಉದ್ಯಾನವನ ಅಭಿವೃದ್ಧಿ ಪಡಿಸುವ ಬಗ್ಗೆ ಈಗಾಗಲೇ ಮೇಲಾಧಿಕಾರಿಯರಿಂದ ಅನುಮತಿ ದೊರಕಿದೆ. ಶಾಲಾ ಮಕ್ಕಳಿಗೆ  ಜಾರುಬಂಡಿ, ಹಾಗೂ ಇನ್ನಿತರ ಆಟವಾಟಿಗಳನ್ನು ಅಳವಡಿಸಲಾಗುವುದು. ಯಾವುದೇ ಶುಲ್ಕ ಪಾವತಿಸದೆ. ವಾರದ ಎಲ್ಲಾ ದಿವಸಗಳಲ್ಲಿ ಹೋಗಲು ಅವಕಾಶ ನೀಡಲಾಗುವುದು.

-ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ

LEAVE A REPLY

Please enter your comment!
Please enter your name here