ಪುತ್ತೂರು :ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಪಡ್ನೂರು ಇದರ ಅಭಿವೃದ್ಧಿ ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯರಾದ ರೇಖಾ ಇವರ ಪತಿ ಪೂವಪ್ಪ ಗೌಡ ಇವರು ಅನಾರೋಗ್ಯದಿಂದಿದ್ದು ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯಧನ ಚೆಕ್ ನ್ನು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ ವಿ ಮನೋಹರ್ ಅವರು ರೇಖಾ ರವರಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ ,ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ, ಮನೇಜರ್ ಸುನಿಲ್ ಕುಮಾರ್, ಮೇಲ್ವಿಚಾರಕರಾದ ಸುಮಲತಾ ಪ್ರೇರಕರಾದ ನಮಿತಾ ಉಪಸ್ಥಿತರಿದ್ದರು.