ಪುತ್ತೂರಿಗೆ ಬಂದ ‘ಪಲ್ಲಕ್ಕಿ’- ಕೆಎಸ್‌ಆರ್‌ಟಿಸಿಯ ನೂತನ‌ ಬಸ್ ಪಲ್ಲಕ್ಕಿಗೆ ಚಾಲನೆ ನೀಡಿದ ಶಾಸಕ ಅಶೋಕ್‌ ರೈ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಿಂದ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಲೋಕಾರ್ಪಣೆಗೊಂಡಿರುವ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳು ಪುತ್ತೂರು ವಿಭಾಗಕ್ಕೆ ನ.7ರಂದು ಆಗಮಿಸಿತು. 4 ಬಸ್‌ಗಳ ಪೈಕಿ 2 ಬಸ್‌ಗಳು ಆಗಮಿಸಿದ್ದು‌ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಪಲ್ಲಕ್ಕಿ ಬಸ್‌ ಗೆ ಚಾಲನೆ ನೀಡಿದರು.ಶಾಸಕ ಅಶೋಕ್ ಕುಮಾರ್ ರೈಯವರು ರಿಬ್ಬನ್ ಕತ್ತರಿಸಿ, ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ , ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ವಿಭಾಗೀಯ ಸಂಚಲಣಾಧಿಕಾರಿ ಮುರಳಿಧರ ಆಚಾರ್ಯ, ವಿಭಾಗೀಯ ಯಾಂತ್ರಿಕ ಶಿಲ್ಪಿ ನಂದ ಕುಮಾರ್, ಹಿರಿಯ ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ ಸೋಮಶೇಖರ, ಸಹಾಯಕ ಲೆಕ್ಕಾಧಿಕಾರಿ ಆಶಾಲತಾ, ಸಹಾಯಕ ಆಡಳಿತಾಧಿಕಾರಿ ರೇವತಿ, ಸಹಾಯಕ ಕಾನೂನು ಅಧಿಕಾರಿ ಸೌಮ್ಯ, ಸಹಾಯಕ ಸಂಖ್ಯಾಧಿಕಾರಿ ಜ್ಯೋತಿ, ಸಿಬಂದಿ ಅಧೀಕ್ಷಕ ಮಹಮ್ಮದ್ ಹುಸೈನ್, ಸಂಚಾರ ನಿಯಂತ್ರಕ ಕೋಚಣ್ಣ ಪೂಜಾರಿ,ಸುಬ್ರಹ್ಮಣ್ಯ ಭಟ್, ಮೇಲ್ವಿಚಾರಕ ಅಬ್ಬಾಸ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡಿರುವ ಈ ಬಸ್ 11.3 ಮೀಟರ್ ಉದ್ದದ 222 ವೀಲ್ ಬೇಸ್ ವೈಕಿಂಗ್ ಲೈಲ್ಯಾಂಡ್ ಚಾಸಿಗಳ ಮೇಲೆ ಈ ನಿರ್ಮಾಣಗೊಂಡಿದೆ. ಬಿಎಸ್-6 ತಂತ್ರಜ್ಞಾನ ಮಾದರಿಯ 197 ಹೆಚ್‌ಪಿ ಇಂಜಿನ್, ಸುಸಜ್ಜಿತವಾಗಿ ವಿನ್ಯಾಸಗೊಳಿಸಿದ 30 ಸ್ಲೀಪರ್ ಬರ್ತ್ ಸೀಟುಗಳು, ಎ-.ಡಿ.ಎಸ್.ಎಸ್ ಸಿಸ್ಡಮ್ಸ್, ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್ ಸೌಲಭ್ಯ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ, ಎಲ್.ಇ.ಡಿ ಪ್ರದರ್ಶಿತ ಬಸ್ ಬರ್ತ್ ಸೀಟುಗಳ ಸಂಖ್ಯೆ, ಓದಲು ಉತ್ತಮ ಬೆಳಕಿನ ಎಲ್.ಇ.ಡಿ ದೀಪಗಳ ಅಳವಡಿಕೆ, ಆಡಿಯೋ ಸ್ಪೀಕರ್‌ಗಳ ಅಳವಡಿಕೆ ಹಾಗೂ ಸಾರ್ವಜನಿಕ ಮಾಹಿತಿ, ಡಿಜಿಟಲ್ ಗಡಿಯಾರ, ಎಲ್.ಇ.ಡಿ ನೆಲಹಾಸು, ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶ ವ್ಯವಸ್ಥೆ, ಪ್ರಯಾಣಿಕರಿಗೆ ತಲೆದಿಂಬು ವ್ಯವಸ್ಥೆ, ಚಾಲಕರಿಗೆ ಸಹಕಾರಿಯಾಗುವಂತೆ ಹಿನ್ನೋಟ ಕ್ಯಾಮರಾಗಳ ಅಳವಡಿಕೆ ಮೊದಲಾದ ವಿಶೇಷತೆಗಳನ್ನು ಒಳಗೊಂಡಿದೆ.

LEAVE A REPLY

Please enter your comment!
Please enter your name here