ಕಬಕ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನ.7ರಂದು ಪೋಷಕರ ಸಭೆಯನ್ನು ನಡೆಸಲಾಯಿತು. ಸುಮಾರು 90 ವಿದ್ಯಾರ್ಥಿಗಳ ಪೋಷಕರು ಸಭೆಗೆ ಹಾಜರಿದ್ದರು. ಸಭೆಯಲ್ಲಿ ಪೋಷಕರಿಗೆ ವನಿತ ಕೆ, ಶ್ರೀನಿವಾಸ ಬಡೆಕ್ಕಿಲ್ಲಾಯ ಪೋಷಕರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಪೋಷಕರಿಂದ ಕೆಲವೊಂದು ಚರ್ಚೆಗಳು ನಡೆದವು. ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಮತ್ತು ವಾರ್ಷಿಕೋತ್ಸವ ನಡೆಸುವ ಬಗ್ಗೆ ಚರ್ಚಿಸಲಾಯಿತು. ನಯನಕುಮಾರಿಯವರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದ ಆದಾಯ ಮತ್ತು ಖರ್ಚಿನ ವಿಷಯಗಳನ್ನು ಸಭೆಯ ಮುಂದಿಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಾಬಾ ವಹಿಸಿಕೊಂಡಿದ್ದರು. ಸಂಸ್ಥೆಯ ಪ್ರಾಂಶುಪಾಲ ಶ್ರೀಧರ ರೈ ಕೆ ಎಲ್ಲರನ್ನು ಸ್ವಾಗತಿಸಿದರು. ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಸುಶ್ಮಿತಾ ಇವರು ಪ್ರಾರ್ಥಿಸಿದರು. ಕವನ ಧನ್ಯವಾದಗೈದರು. ಉಪನ್ಯಾಸಕಿಯರಾದ ಚಂದ್ರಿಕಾ ,ಸ್ವಾತಿ, ಶೋಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.