ಜಿಲ್ಲಾ ಮಟ್ಟದ ಕ್ರೀಡಾಕೂಟ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು:ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಮೂಡಬಿದ್ರೆ, ಸ್ಪರಾಜ್ಯ ಮೈದಾನದಲ್ಲಿ ಅ. 30 ಮತ್ತು 31ರಂದು ಜಿಲ್ಲಾ ಮಟ್ಟದ  ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, 3 ವಿಭಾಗದಲ್ಲಿ ಪ್ರಥಮ, 3 ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಗಳೊಂದಿಗೆ ಅನೇಕ ಪದಕಗಳನ್ನುಮತ್ತು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, 10 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗ: ಸಾತ್ವಿಕ್ ಆರ್ 10ನೇ ತರಗತಿ -110 ಮೀಟರ್ ಹರ್ಡಲ್ಸ್ ಪ್ರಥಮ. ಸಚಿತ್ ಪಿ.ಕೆ 10ನೇ ತರಗತಿ 400 ಮೀಟರ್ ದ್ವಿತೀಯ , 800 ಮೀಟರ್ ಪ್ರಥಮ. ಯಶ್ವಿತ್ ಡಿ ಪಿ 10ನೇ ತರಗತಿ ಎತ್ತರ ಜಿಗಿತ ದ್ವಿತೀಯ, 4100 ಮೀಟರ್ ರಿಲೇ ಪ್ರಥಮ. ( ಮನ್ವಿತ್ ನೆ ಕ್ಕರೆ, ಮನೋಹರ ಕೆ, ಸಚಿತ್ ಪಿ ಕೆ ಮತ್ತು ಸಾತ್ವಿಕ್ ಆರ್) ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ 4 ವಿಭಾಗದಲ್ಲಿ ಪುತ್ತೂರಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿರುತ್ತಾರೆ. 17ರ ವಯೋಮಾನದ  ಬಾಲಕಿಯರ ವಿಭಾಗ: ಡಿಂಪಲ್ ಶೆಟ್ಟಿ 400 ಮೀಟರ್ ಪ್ರಥಮ, ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ ಉದ್ದ ಜಿಗಿತ ಪ್ರಥಮ, 100 ಮೀಟರ್ ಹರ್ಡಲ್ಸ್ ದ್ವಿತೀಯ 4100  ಮೀಟರ್ ರಿಲೇ ದ್ವಿತೀಯ ( ಡಿಂಪಲ್ ಶೆಟ್ಟಿ, ರಿಧಿ ಸಿ ಶೆಟ್ಟಿ, ಕೃತಿ ಕೆ ಮತ್ತು ಸಾನ್ವಿ ಎಸ್ ಪಿ ). ಈ ವಿಭಾಗದಲ್ಲೂ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
14ರ ವಯೋಮಾನದ ಬಾಲಕರ ವಿಭಾಗ: ಚೇತಸ್ ಪಿ ವೈ 8ನೇ ತರಗತಿ 400 ಮೀಟರ್ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.

14ರ ವಯೋಮಾನದ ಬಾಲಕಿಯರ ವಿಭಾಗ: ದಿವಿಜ್ಞಾ ಯು ಎಸ್ 8ನೇ ತರಗತಿ  200 ಮೀಟರ್ ಪ್ರಥಮ,400 ಮೀಟರ್ ಪ್ರಥಮ, 600 ಮೀಟರ್ ಪ್ರಥಮ ಹಾಗೂ ಈ ವಿಭಾಗದಲ್ಲಿ 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿರುತ್ತಾಳೆ. ಚಿಂತನ ಸಿ 8ನೇ ತರಗತಿ 80 ಮೀಟರ್ ಹರ್ಡಲ್ಸ್ ಪ್ರಥಮ. ಈ ವಿಭಾಗದಲ್ಲಿ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
14ರ ವಯೋಮಾನದ ಬಾಲಕಿಯರ ಪ್ರಾಥಮಿಕ ವಿಭಾಗ:
 ಆತ್ಮಿ ಕೆ ಎಲ್ 6ನೇ ತರಗತಿ 100 ಮೀಟರ್ ಪ್ರಥಮ, 200 ಮೀಟರ್ ದ್ವಿತೀಯ. ನಿಧಿ ಶ್ರೀ ಕೆ 7ನೇ ತರಗತಿ 80 ಮೀಟರ್ ಹರ್ಡಲ್ಸ್ ಪ್ರಥಮ, ಶ್ರೀರಕ್ಷಾ 7ನೇ ತರಗತಿ 600 ಮೀಟರ್ ತೃತೀಯ ಸ್ಥಾನ ಗಳಿಸಿರುತ್ತಾರೆ.

ವಿದ್ಯಾರ್ಥಿಗಳು 3 ವಿಭಾಗದಲ್ಲಿ ಪ್ರಥಮ,3 ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಗಳೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ವಿದ್ಯಾರ್ಥಿಗಳು  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ಇವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here