ಪುತ್ತೂರು: ಪರ್ಲಡ್ಕ ರಸ್ತೆಗೆ ಅಡ್ಡವಾಗಿ ಬೃಹತ್ ಗಾತ್ರದ ಮಾವಿನ ಮರವೊಂದು ನ.9ರಂದು ಬೆಳಗ್ಗೆ ಬಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಪರ್ಲಡ್ಕ ಕಲ್ಕತ್ತ ಭಟ್ ಎಂಬವರ ಕಂಪೌಂಡ್‌ನೊಳಗಿದ್ದ ಮಾವಿನ ಮರ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬಿದ್ದಿದೆ. ಮರ ರಸ್ತೆಗೆ ಅಡ್ಡವಾಗಿ ರಸ್ತೆಯ ಮತ್ತೊಂದು ಅಂಚಿನಲ್ಲಿರುವ ಕಲ್ಕತ್ತ ಭಟ್ ಕಂಪೌಂಡ್‌ಗೆ ಸೇರಿದ ಆವರಣಕ್ಕೆ ಬಿದ್ದಿದೆ. ಮರ ಬಿದ್ದು ಪಕ್ಕದಲ್ಲಿರುವ ಹಳೆ ಹಂಚಿನ ಮನೆಗೂ ಹಾನಿಯಾಗಿದೆ. ನಿರಂತರ ಜನ, ವಾಹನ ಸಂಚಾರ ಇರುವ ಈ ರಸ್ತೆಯಲ್ಲಿ ಬೆಳ್ಳಂಬೆಳಗೆ ಮರ ಬಿಳುವ ಸಂದರ್ಭ ಯಾರು ಇಲ್ಲದ ಕಾರಣ ಭಾರಿ ಅಪಾಯವೊಂದು ತಪ್ಪಿದೆ. ಪುತ್ತೂರು ಅಗ್ನಿಶಾಮಕದಳ, ನಗರಸಭೆ, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಯಂದ ಬಂದ ಸಿಬ್ಬಂದಿಗಳು ಸ್ಥಳೀಯರೊಂದಿಗೆ ಸೇರಿ ಮರ ತೆರವು ಕಾರ್ಯಚರಣೆ ಮಾಡಿದರು. ಮಧ್ಯಾಹ್ನ ಗಂಟೆ 12ರ ಸುಮಾರಿಗೆ ಮರ ತೆರವು ಮಾಡಲಾಗಿದ್ದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.