ವಿಟ್ಲ: ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಅಂಗವಾಗಿ “ಕನ್ನಡ ಡಿಂಡಿಮ -2023” ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಇಸ್ಮತ್ ಪಜೀರ್ ರವರನ್ನು ಸನ್ಮಾನಿಸಾಯಿತು. ಕಾರ್ಯಕ್ರಮದಲ್ಲಿ ಜನಪ್ರಿಯ ಶಾಲಾ ಮಕ್ಕಳು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಭಾಷಣ, ಹಾಡು, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಲವು ಕನ್ನಡ ಕವಿಗಳ, ಹೋರಾಟಗಾರರ ವೇಷ ಧರಿಸಿದ ಮಕ್ಕಳ ಛದ್ಮವೇಶವು ಪ್ರಮುಖ ಆಕರ್ಷಣೆಯಾಗಿತ್ತು. 3ನೇ ತರಗತಿಯ ದಿಶಾನ್ ಮತ್ತು 6ನೇ ತರಗತಿಯ ಚುಕ್ಕಿ ನಡೆಸಿಕೊಟ್ಟ ಲಾವಣಿ ಮತ್ತು ಏಕ ಪಾತ್ರಾಭಿನಯವು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ರವರು ಸಂದರ್ಭೋಚಿತವಾಗಿ ಮಾತನಾಡಿ ರಾಜ್ಯೋತ್ಸವದ ಶುಭ ಹಾರೈಸಿದರು.
ವೇದಿಕೆಯಲ್ಲಿ ಜನಪ್ರಿಯು ಸೆಂಟ್ರಲ್ ಸ್ಕೂಲ್ ನ ಆಡಳಿತ ಸಮಿತಿಯ ನಿರ್ದೇಶಕ ನೌಶೀನ್ ಬದ್ರಿಯಾ, ಶಾಲಾ ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಝುಲ್ಫ ಸ್ವಾಗತಿಸಿ, ತ್ವಾಹ ವಂದಿಸಿದರು. ಆಫ್ಫಾನ್ ಮತ್ತು ರಿಲ್ಹ ಕಾರ್ಯಕ್ರಮ ನಿರೂಪಿಸಿದರು