ತಾಲೂಕು ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರ ಪ್ರಗತಿಪರಿಶೀಲನಾ ಸಭೆ

0

ಪುತ್ತೂರು: ಪುತ್ತೂರು ತಾಲೂಕು ವಿಕಲಚೇತನರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರ ಅಕ್ಟೋಬರ್ ತಿಂಗಳ ಪ್ರಗತಿಪರಿಶೀಲನಾ ಸಭೆ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ನೋಡಲ್ ಅಧಿಕಾರಿ ಮಂಗಳ ಕಾಳೆ ಕಾರ್ಯಕರ್ತರ ಹಾಜರಾತಿ ಅಂಕಿ ಅಂಶಗಳನ್ನು ಪರಿಶೀಲಿಸಿ ವಿಕಲಚೇತನರ ಇಲಾಖೆಯಡಿ ಕಾರ್ಯನಿರ್ವಹಿಸಿತ್ತಿರುವ ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರು ಆಧಾರ್ ಕಾರ್ಡ್ ಇಲ್ಲದೆ ಯುಡಿಐಡಿ ಕಾರ್ಡ್ ಆಗದೆ ಇರುವ ವಿಕಲಚೇತನರ ಮನೆ ಬೇಟಿ ಮಾಡಬೇಕು. ಕಾರ್ಯಕರ್ತರು ಹಾಜರಾತಿ ಬರೆಯುವಾಗ ವಿಕಲಚೇತನರ ಸಮೀಕ್ಷೆ ಹಾಗೂ ಕರ್ತವ್ಯ ನಿರ್ವಹಿಸಿದ ಸಂಪೂರ್ಣ ಮಾಹಿತಿಯನ್ನು ಪ್ರಗತಿವಾರು ವರದಿಯಲ್ಲಿ ನಮೋದಿಸಬೇಕು. ವಿಕಲಚೇತನರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು. ಪುತ್ತೂರು ತಾಲೂಕು ವಿಕಲಚೇತನರ ನೂತನ ನೋಡಲ್ ಅಧಿಕಾರಿ ಮಂಗಳ ಕಾಳೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಿಕಲಚೇತನರ ಇಲಾಖಾ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಕಡಬ ತಾಲೂಕು ಪಂಚಾಯತ್, ತಾಲೂಕು ವಿಕಲಚೇತನರ ಇಲಾಖಾ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತೆ ಅಕ್ಷತಾ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ಅಕ್ಟೋಬರ್ ತಿಂಗಳ ಪ್ರಗತಿ ಪರಶೀಲನಾ ಸಭೆಯ ವರದಿ ವಾಚಿಸಿದರು. ವಿಕಲಚೇತನರ, ನೂತನ ನೋಡಲ್ ಅಧಿಕಾರಿ ಮಂಗಳ ಕಾಳೆರವರನ್ನು ಪುನರ್ವಸತಿ ಕಾರ್ಯಕರ್ತರ ಪರವಾಗಿ ಹೂ ಗುಚ್ಛ ನೀಡಿ ಅಭಿನಂದಿಸಿಲಾಯಿತು.


ಬೆನ್ನುಹುರಿ ಅಪಘಾತ ಮಾಹಿತಿ ಕಾರ್ಯಗಾರ: ಪುಗತಿ ಪರಿಶೀಲನಾ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸೇವಾಭಾರತಿ ಹಿರಿಯ ಕ್ಷೇತ್ರ ಸಂಯೋಜಕ ಮನು ಆರ್.ರವರು ಬೆನ್ನುಹುರಿ ಅಪಘಾತದ ಪರಿಣಾಮಗಳ ಮಾಹಿತಿ ನೀಡಿದರು. ಬೆನ್ನುಹುರಿ ಅಪಘಾತಕ್ಕೆ ಒಳಗಾದ ಮೋಹನ್ ಕೆ. ದರ್ಭೆತ್ತಡ್ಕರವರು ಸೇವಾಭಾರತಿ ಸಂಸ್ಥೆಯ ಕೆಲಸದ ಅನುಭವ ತಿಳಿಸಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಡಿಸೆಂಬರ್ ತಿಂಗಳಲ್ಲಿ ನಡೆಯುವ ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆಸಿದರು. 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನ ಪುನರ್ವಸತಿ ಕಾರ್ಯಕರ್ತೆ ಸೇಸಪ್ಪ ಶಾಂತಿನಗರ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here