ಪಟ್ಟೆ-ಪುಳಿತ್ತಡಿ-ಈಶ್ವರಮಂಗಲ ಜಿ.ಪಂ ರಸ್ತೆ ಮೇಲೆ ಕೆಸರು, ಪ್ರಯಾಣಕ್ಕೆ ಅಡ್ಡಿ

0

ಬಡಗನ್ನೂರು: ಪಟ್ಟೆ-ಪುಳಿತ್ತಡಿ-ಈಶ್ವರಮಂಗಲ ಜಿ.ಪಂ ರಸ್ತೆಯ ಬಾಣಪದವು ಎಂಬಲ್ಲಿ ನ.8ರ ರಾತ್ರಿ ಸುರಿದ ಧಾರಾಕಾರ ಮಳೆಯಲ್ಲಿ ಗುಡ್ಡ ಪ್ರದೇಶದಿಂದ ರಭಸವಾಗಿ  ನೀರು ಹರಿದು ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿಮಾಡಿದೆ. ಈ ಭಾಗದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ  ವಾಹನ ಸಂಚಾರಕ್ಕೆ ಕಷ್ಟಕರ ಪಡುತ್ತಿದ್ದಾರೆ.

ರಸ್ತೆ ಮೇಲ್ಭಾಗದಲ್ಲಿ ಖಾಸಗಿ ವ್ಯಕ್ತಿಗಳು ಮನೆ ಹಾಗೂ ಇತರ ಯೋಜನೆಗೆ ಗುಡ್ಡ ಪ್ರದೇಶವನ್ನು ಸಮತಟ್ಟು ಮಾಡಿರುತ್ತಾರೆ. ಮುಖ್ಯ ರಸ್ತೆಯ ಚರಂಡಿ ಮುಚ್ಚಿ ಖಾಸಗಿ ಜಮೀನಿಗೆ ರಸ್ತೆ ಸಂಪರ್ಕ ಕಲ್ಲಿಸಿರುತ್ತಾರೆ. ಮಳೆ ಕಾಲದಲ್ಲಿ ಚರಂಡಿ ಹಾಕಿದ ಮಣ್ಣನ್ನು ತೆರವುಗೊಳಿಸದೆ ಮಳೆಯ ನೀರು ರಸ್ತೆಯ ಮೇಲ್ಭಾಗದಲ್ಲಿ ಹರಿದು ರಸ್ತೆ ಮೇಲೆ ಮಣ್ಣು ತುಂಬಿ ಡಾಮಾರು ಕಾಣದೆ ಕೆಸರುಮಾಯಾಗಿ ಸಂಚಾರಕ್ಕೆ ತೊಡಕು ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯ ರಸ್ತೆಯಿಂದ ಸಂಪರ್ಕ ಪಡೆಯುವ ಸಂದರ್ಭದಲ್ಲಿ ರಸ್ತೆ ಚರಂಡಿಗೆ  2 ಇಂಚು ಗಾತ್ರದ ಮೋರಿ ಅಳವಡಿಸುವಂತೆ ಆದೇಶ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here