ಪುತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್ – ನ.13-14: ಆಕರ್ಷಕ ಕರಿಮಣಿ ಮೇಳ

0

ಪುತ್ತೂರು: ಹತ್ತೂರಿನ ಚಿನ್ನದಂತಹ ಜನರ ಮನಗೆದ್ದಿರುವ ಮಾನಕ ಜ್ಯುವೆಲ್ಲರ‍್ಸ್‌ನ ಸಹ ಸಂಸ್ಥೆ ಸಿಪಿಸಿ ಪ್ಲಾಝಾದ ಎದುರಿನ ಎಂ.ಎಸ್.ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭವಾಗಿರುವ ನ್ಯೂ ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಆಫರ್‌ನೊಂದಿಗೆ ಆಕರ್ಷಕ ಕರಿಮಣಿ ಮೇಳ ನಡೆಯಲಿದೆ. ನ.13 ರಂದು ಈ ಮೇಳ ಆರಂಭಗೊಳ್ಳಲಿದ್ದು ನ.14 ರ ತನಕ ಇರಲಿದೆ. ವಿವಿಧ ವಿನ್ಯಾಸದ ಆಕರ್ಷಕ ಕರಿಮಣಿಗಾಗಿ ಈಗಾಗಲೇ ಹೆಸರುವಾಸಿಯಾಗಿರುವ ಮಾನಕ ಜ್ಯುವೆಲ್ಲರ‍್ಸ್ ಈ ವರ್ಷದ ದೀಪಾವಳಿಗೆ ಗ್ರಾಹಕರ ಮನದಿಚ್ಛೆಯಂತೆ ನವನವೀನ ಕರಿಮಣಿ ಸರಗಳನ್ನು ಮೇಳದಲ್ಲಿ ಪ್ರದರ್ಶನ ಮಾಡಲಿದೆ. ಗ್ರಾಹಕರ ಅನುಕೂಲಕ್ಕಾಗಿ ಕರಿಮಣಿ ಖರೀದಿಗೆ ಪ್ರತಿ ಗ್ರಾಂ ಮೇಲೆ ರೂ.100 ರಿಯಾಯಿತಿ ಕೂಡ ದೊರೆಯಲಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ಈ ವರ್ಷದ ದೀಪಾವಳಿಯನ್ನು ಮಾನಕದ ವಜ್ರಾಭರಣಗಳ ಜೊತೆಯಲ್ಲಿ ಸಂಭ್ರಮಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕರಿಮಣಿ ಮೇಳದ ವಿಶೇಷತೆಯಾಗಿ ಲಾಂಗ್ ಆಂಡ್ ಶಾರ್ಟ್‌ನ ಆಕರ್ಷಕ ವಿನ್ಯಾಸದ ಶುದ್ದ 916 ಚಿನ್ನದ ಹ್ಯಾಂಡ್‌ಮೇಡ್ ಕರಿಮಣಿಗಳು ಲಭ್ಯವಿದೆ. ಗ್ರಾಹಕರು ಈ ದೀಪಾವಳಿಯನ್ನು ನಿಮ್ಮ ನೆಚ್ಚಿನ ಮಾನಕದೊಂದಿಗೆ ಸಂಭ್ರಮಿಸಬಹುದಾಗಿದೆ.

LEAVE A REPLY

Please enter your comment!
Please enter your name here