ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ಲಕ್ಷ್ಮೀಪೂಜೆ, ಗ್ರಾಹಕರಿಗೆ ವಿವಿಧ ಕೊಡುಗೆಗಳು

0

ಪುತ್ತೂರು:ಇಲ್ಲಿನ ಮುಖ್ಯರಸ್ತೆಯ ಸಂಜೀವ ಶೆಟ್ಟಿ ಜವುಳಿ ಮಳಿಗೆ ಬಳಿಯಿರುವ ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಚಿನ್ನ ಖರೀದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.
2 ಗ್ರಾಂ ಮೇಲ್ಪಟ್ಟು ಚಿನ್ನಾಭರಣ ಖರೀದಿಗೆ ಉಚಿತ ಬೆಳ್ಳಿ ನಾಣ್ಯ ಹಾಗೂ ಮಜೂರಿ ಉಚಿತ ಕೊಡುಗೆಗಳು ಹಾಗೂ ಬೆಳ್ಳಿ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತುಗಳನ್ನು ನೀಡುತ್ತಿದ್ದು, ಈ ಕೊಡುಗೆಗಳು ನ.10ರಿಂದ 15ರ ತನಕ ಲಭ್ಯವಿದೆ. ನ.12ರಿಂದ 13ರ ತನಕ ಹಳೇ 916 ಚಿನ್ನಾಭರಣಗಳ ಎಕ್ಸ್‌ಚೇಂಜ್ ಮೇಲೆ ಪ್ರತಿಗ್ರಾಂ ಚಿನ್ನಕ್ಕೆ ರೂ.50ನ್ನು ಹೆಚ್ಚುವರಿಯಾಗಿ ಪಡೆಯುವ ಸುವರ್ಣಾವಕಾಶವನ್ನು ನೀಡಲಾಗಿತ್ತು.

ಲಕ್ಷ್ಮೀಪೂಜೆ:
ದೀಪಾವಳಿಯ ಅಂಗವಾಗಿ ಪ್ರರತಿ ವರ್ಷದಂತೆ ಈ ವರ್ಷದವು ನ.12ರಂದು ಸಂಜೆ ಲಕ್ಷ್ಮೀಪೂಜೆ ನೆವೇರಿತು. ಮ್ಹಾಲಕರು, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here