ಉಪ್ಪಿನಂಗಡಿ: ಉಪ್ಪಿನಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರ ಆಂಗ್ಲಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ ಲಭಿಸಿದೆ.
ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿಯ ಖತೀಜ ಶಹೀದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 9ನೇ ತರಗತಿಯ ಆಯಿಷ ನಿಶಾನ ಇಂಗ್ಲಿಷ್ ಭಾಷಣದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 7ನೇ ತರಗತಿಯ ತಹಾನೀ ಹಿಂದಿ ಕಂಠಪಾಠದಲ್ಲಿ ಪ್ರಥಮ, ಯೂಸುಫ್ ಫರ್ಹಾನ್ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಹಾಗೂ ಆಶುಭಾಷಣದಲ್ಲಿ ತೃತೀಯ, 6ನೇ ತರಗತಿಯ ಕೌಶಾನ್ ಮಿಮಿಕ್ರಿಯಲ್ಲಿ ತೃತೀಯ, ನಾಲ್ಕನೇ ತರಗತಿಯ ನಶ್ವಾನ್ ಧಾರ್ಮಿಕ ಪಠಣದಲ್ಲಿ ತೃತೀಯ, 7ನೇ ತರಗತಿಯ ಖತೀಜ ಲಿಝ ಚಿತ್ರಕಲೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲೆಯ ಸಂಚಾಲಕರಾದ ಹಾಜಿ ಕೆ.ಪಿ.ಎ.ಸಿದ್ದೀಕ್, ಶಾಲಾ ಮುಖ್ಯಶಿಕ್ಷಕಿ ಕವಿತ ನವೀನ್‌ಕುಲಾಲ್, ಶಾಲಾ ಶಿಕ್ಷಕರು ತರಬೇತಿ ನೀಡಿದ್ದರು.