ಎಸ್.ಪಿ ವೈ.ಎಸ್.ಎಸ್ ಯೋಗಬಂಧುಗಳಿಂದ ಕೊಯಿಲದಲ್ಲಿ ಗೋಪೂಜೆ ಆಚರಣೆ

0

ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ ಕರ್ನಾಟಕ ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಮಂಗಳೂರು ಕೊಯಿಲ, ಆಲಂಕಾರು, ಉಪ್ಪಿನಂಗಡಿ, ಗಾಣಿಗ ಸಮುದಾಯ ಭವನದ ಯೋಗಬಂಧುಗಳಿಂದ ಕೊಯಿಲದ ಜಾನುವಾರು ಸಂವರ್ಧನ ಮತ್ತು ಸಂಶೋಧನಾ ಕೇಂದ್ರದಲ್ಲಿ
ಜಾನುವಾರು ಸಂವರ್ಧನಾ ಮತ್ತು ಸಂಶೋಧನಾ ಕೇಂದ್ರ ಕೊಯಿಲ ಇದರ ಸಹಯೋಗದೊಂದಿಗೆ ದೀಪಾವಳಿಯ ಪ್ರಯುಕ್ತ ವಿಶೇಷ ಗೋಪೂಜೆಯನ್ನು‌ ನ.12 ರಂದು ಸಂಜೆ ಆಚರಿಸಲಾಯಿತು.


ಭಜನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿ, ಜಾನುವಾರು ಸಂವರ್ಧನಾ ಮತ್ತು ಸಂಶೋಧನಾ ಕೇಂದ್ರದ ದಿವಾಕರಣ್ಣ ಮತ್ತು ಆತೂರು ಸದಾಶಿವ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹಾಗೂ ಯೋಗ ಬಂಧುಗಳು ಸೇರಿ ದೀಪ ಪ್ರಜ್ವಲನೆ ನೆರವೇರಿಸಿದರು ಮುರಳಿ ಕೃಷ್ಣ ಬಡಿಲ ರವರು ಗೋಪೂಜೆಯ ಮಹತ್ವ ತಿಳಿಸಿದರು.
ನಂತರ ಕೊಯಿಲ, ಆಲಂಕಾರು, ಉಪ್ಪಿನಂಗಡಿ, ಗಾಣಿಗಸಮುದಾಯಭವನದ ಯೋಗಬಂಧುಗಳು ಗೋ ಸ್ನಾನ ,ಗೋಪೂಜೆ , ಗೋಗ್ರಾಸವನ್ನು ನೇರವೆರಿಸಿದರು ನಂತರ ಅನ್ನಪೂರ್ಣೇಶ್ವರಿ ಮಂತ್ರದೊಂದಿಗೆ ಪ್ರಸಾದ ವಿತರಿಸಲಾಯಿತು, ಕಾರ್ಯಕ್ರಮದ ನಿರೂಪಣೆಯನ್ನು ಕೊಯಿಲ ಶಾಖೆಯ ಯೋಗ ಬಂಧು ಚೇತನ್ ಆನೆಗುಂಡಿ ನೆರವೇರಿಸಿ ಶಿಕ್ಷಕರಾದ ಕೃಷ್ಣಪ್ಪಣ್ಣ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಕದ್ರಿ ನಗರ ಮಾರ್ಗದರ್ಶಕರಾದ ಆನಂದಣ್ಣ, ತಾಲೂಕು ಸಹ ಶಿಕ್ಷಣ ಪ್ರಮುಖರಾದ ಪ್ರದೀಪ್ ,ಉಪ್ಪಿನಂಗಡಿ ಯೋಗ ಶಿಕ್ಷಕರಾಗಿರುವ ಸಂತೋಷ್ ಕುಮಾರ್, ಆಲಂಕಾರು ಶಾಖೆಯ ಸಂಚಾಲಕರಾದ ಸದಾಶಿವ ಶೆಟ್ಟಿ ಮಾರಂಗ, ಗಾಣಿಗ ಸಮುದಾಯ ಭವನ ಶಾಖೆಯ ಸಂಚಾಲಕರಾದ ಯಶೋದರಣ್ಣ, ಉಪ್ಪಿನಂಗಡಿ ಶಾಖೆಯ ಶ್ರೀಜ ಸೇರಿದಂತೆ ಸುಮಾರು 120 ಯೋಗಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here