ಪುತ್ತೂರು: SPYSS ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ನ.12 ರಂದು ಗೋವು ಸ್ವಚ್ಛತೆ ಮತ್ತು ಗೋವು ಪೂಜೆ ಕಾರ್ಯಕ್ರಮವನ್ನು ಶ್ರೀ ಸೌತಡ್ಕ ಮಹಾ ಗಣಪತಿ ಕ್ಷೇತ್ರ ಕೊಕ್ಕಡದ ಕಾಮಧೇನು ಗೋಶಾಲೆಯಲ್ಲಿ ನಡೆಲಾಯಿತು.
ಕಾರ್ಯಕ್ರಮವನ್ನು ಶ್ರೀ ದಂಡನಾಯಕ ಶ್ರೀ ಉಳ್ಳಾಲ್ತಿ ಶಾಖೆಯಿಂದ ಭಜನೆಯೊಂದಿಗೆ ಆರಂಬಿಸಲಾಯಿತು.
ಸುಭದ್ರ ಶಾಖೆಯ ಸುರೇಶ ಶ್ರೀ ಕ್ಷೇತ್ರದ ಪಾವಿತ್ರ್ಯತೆ, ಗೋವು ಮಹತ್ವ, ಪೂಜೆ, ಸ್ವಚ್ಛತೆ ಅರಿವು ಮತ್ತು ದೀಪಾವಳಿ ಹಬ್ಬದ ಹಿನ್ನಲೆ ಆಚರಣೆ ಹಾಗೂ ಕ್ಷೇತ್ರ ಸಾನಿಧ್ಯದಲ್ಲಿ ಶ್ರೀ ಗಣೇಶನ ಮಹಿಮೆಯ ಬಗ್ಗೆ ತಿಳಿಸಿದರು.ಸುಭದ್ರ ಶಾಖೆಯ ಸಂತೋಷ್ , ಯಶೋಧ ವೇದಿಕೆಯಲ್ಲಿ ಪ್ರಾತ್ಯಕ್ಷಿಕೆಯನ್ನು ನೀಡಿದರು.ಸದಾಶಿವ ಮತ್ತು ಶಾರದ ದಂಪತಿಗಳು ಅಗ್ನಿಹೋತ್ರ ನಡೆಸಿಕೊಟ್ಟರು.ಒಟ್ಟು 136 ಯೋಗ ಬಂಧುಗಳು ಗೋವುಗಳ ಪ್ರಾಂಗಣ, ಮತ್ತು ಗೋವುಗಳ ಸ್ವಚ್ಛತೆ ಮತ್ತು ಪೂಜಾ ವಿಧಾನಗಳ ಮೂಲಕ ಸೇವೆಯನ್ನು ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನ ಹಾಗೂ ವಿಟ್ಲ ಶಾಖೆಯ ಯೋಗ ಬಂಧುಗಳು ಉಪಸ್ಥಿತರಿದ್ದರು.ಸೃಷ್ಟಿ ಪ್ರಾರ್ಥಿಸಿ, .ಮಮತ, ದಿವ್ಯಶ್ರೀ , ನಿಶ್ಚಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ಆಫೀಸರ್ಸ್ ಕ್ಲಬ್ ಶಾಖೆಯ ಮುಖ್ಯ ಶಿಕ್ಷಕ ಕೃಷ್ಣಾನಂದ ವೇದಿಕೆಯನ್ನು ನಿರ್ವಹಿಸಿ,ಕಾರ್ಯಕ್ರಮದ ಸಂಚಾಲಕ ಶಾಂತಕುಮಾರ್ ವಂದಿಸಿ,ಲಯನ್ಸ್ ಶಾಖೆಯ ಶಿಕ್ಷಕ ಸತೀಶ್ ನಿರೂಪಿಸಿದರು.