ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 2024ರ ಕ್ಯಾಲೆಂಡರ್ ಬಿಡುಗಡೆ

0

2024ರ ಚಾಲೆಂಜಿಂಗ್ ವರ್ಷದಲ್ಲಿ ಸಂಘ ಯಶಸ್ವಿಯಾಗಲಿ – ವಿಶ್ವನಾಥ ಗೌಡ ಕೆ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 2024 ಚಾಲೆಂಜಿಂಗ್ ವರ್ಷವಾಗಿದೆ. ಯಾಕೆಂದರೆ ಸಂಘವು ರೂ. 500 ಕೋಟಿ ದಾಖಲೆ ವ್ಯವಹಾರ ಮಾಡಬೇಕು ಮತ್ತು ಶೇ.100 ಸಾಲ ವಸೂಲಾತಿ ಆಗಬೇಕು. ಈ ನಿಟ್ಟಿನಲ್ಲಿ ಸಂಘ ಯಶಸ್ವಿಯಾಗಲಿ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಹೇಳಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ನ.13ರಂದು ನಡೆದ ಸಭೆಯಲ್ಲಿ ಅವರು ಸಂಘದ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಸಂಘವು ಯಶಸ್ವಿಯಾಗಿ ವ್ಯವಹಾರದಲ್ಲಿ ಮುಂದೆ ಸಾಗುತ್ತಿದೆ. ಅದೇ ರೀತಿ ಗ್ರಾಹಕರ ಮನ ಮನಸ್ಸು ತಲುಪುವಲ್ಲಿ ಕ್ಯಾಲೆಂಡರ್ ಅಗತ್ಯ. ಈ ನಿಟ್ಟಿನಲ್ಲಿ ಕ್ಯಾಲೆಂಡರ್ ಎಲ್ಲಾ ಗ್ರಾಹಕರಿಗೆ ತಲುಪಲಿ ಎಂದು ಹಾರೈಸಿದರು.

ಆದಷ್ಟು ಶೀಘ್ರದಲ್ಲಿ ಕ್ಯಾಲೆಂಡರ್ ಗ್ರಾಹಕರಿಗೆ ಸಿಗಬೇಕು:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಕಡಿಮೆ ಅವಧಿಯಲ್ಲಿ 2 ತಿಂಗಳ ಮುಂದೆಯೇ 2024ರ ಕ್ಯಾಲೆಂಡರ್ ಮುದ್ರಣ ಆಗಿದೆ. ಇನ್ನು ಆದಷ್ಟು ಶೀಘ್ರದಲ್ಲಿ ಗ್ರಾಹಕರಿಗೆ ಕ್ಯಾಲೆಂಡರ್ ಸಿಗಬೇಕೆಂದು ಹೇಳಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳವೇಲು, ರಾಮಕೃಷ್ಣ ಗೌಡ ಕರ್ಮಲ, ಸತೀಶ್ ಪಾಂಬಾರು, ಸಲಹಾ ಸಮಿತಿ ಸದಸ್ಯರಾದ ನಾರಾಯಣ ಗೌಡ, ಲಿಂಗಪ್ಪ ಗೌಡ ತೆಂಕಿಲ, ಸಂಘದ ಆಂತರಿಕ ಲೆಕ್ಕಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಎಪಿಎಂಸಿ ಶಾಖಾ ವ್ವವಸ್ಥಾಪಕಿ ತೇಜಸ್ವಿನಿ ಸಹಿತ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here