ನ.18-19: ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಮಜ್ಜಾರು ಗದ್ದೆಯಲ್ಲಿ 6ನೇ ವರ್ಷದ ಕೆಸರುಡೊಂಜಿ ದಿನ

0

ಯುವ ಪ್ರಶಸ್ತಿ ಪ್ರದಾನ * ಸಾಂಸ್ಕೃತಿಕ ಕಾರ್ಯಕ್ರಮ * ಕುಣಿತ ಭಜನೆ * ಸಾಧಕರಿಗೆ ಸನ್ಮಾನ * ವಿವಿಧ ಆಟೋಟ ಸ್ಪರ್ಧೆಗಳು

ಪುತ್ತೂರು: ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಶ್ರಮ, ಸೇವೆ, ಸಹಾಯ ಎಂಬ ಧ್ಯೇಯ ವಾಕ್ಯದೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ೬ ನೇ ವರ್ಷದ ಕೆಸರುಡೊಂಜಿ ದಿನ ನ.18 ಮತ್ತು 19ರಂದು ಮಜ್ಜಾರು ಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ನ.18ರಂದು ಸಂಜೆ ತ್ಯಾಗರಾಜನಗರದಿಂದ ಮಜ್ಜಾರಡ್ಕದವರೆಗೆ ಕುಣಿತ ಭಜನೆ ನಡೆಯಲಿದ್ದು ಸಂಜೆ 7 ಕ್ಕೆ ಸಭಾ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಮತ್ತು ಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಶಾಸಕರಾದ ಅಶೋಕ್ ಕುಮಾರ್ ರೈ ಸಭಾಧ್ಯಕ್ಷತೆ ವಹಿಸಲಿದ್ದು ಅರುಣ್ ಕುಮಾರ್ ಪುತ್ತಿಲ ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನ.19ರಂದು ಬೆಳಿಗ್ಗೆ ಕಂಬಳದ ಕೋಣಗಳು ಕೆಸರು ಗದ್ದೆಗೆ ಇಳಿಯುವ ಮೂಲಕ ಆಟೋಟ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದ್ದು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವ ಅಧ್ಯಕ್ಷರಾದ ಕೆ.ಮೋಹನ ರೈ ಓಲೆಮುಂಡೋವುರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ರಘುನಾಥ ಗೋಳ್ತಿಲ ಸಭಾಧ್ಯಕ್ಷತೆ ವಹಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನ.18ರಂದು ಸಂಜೆ ದಿ.ಜಯಂತಿ ಮಜ್ಜಾರು ವೇದಿಕೆಯಲ್ಲಿ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ರಾತ್ರಿ 10 ರಿಂದ ಶ್ರೀ ವಿಷ್ಣು ಯುವಶಕ್ತಿ ಬಳಗ ಅರ್ಪಿಸುವ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ‘ಕಲ್ಜಿಗದ ಮಾಯ್ಕಾರೆ ಮಂಜುರ್ಲಿ’ ಎಂಬ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.

ಕುಣಿತ ಭಜನೆ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನ.18ರಂದು ಸಂಜೆ 4 ರಿಂದ ಕುಣಿತ ಭಜನೆ ನಡೆಯಲಿದೆ. ತ್ಯಾಗರಾಜನಗರದಿಂದ ಮಜ್ಜಾರಡ್ಕದ ತನಕ ಕುಣಿತ ಭಜನೆಯ ಮೂಲಕ ಆಕರ್ಷಕ ಮೆರವಣಿಗೆ ನಡೆಯಲಿದೆ.

ಕಂಬಳದ ಕೋಣಗಳು ವಿಶೇಷ ಆಕರ್ಷಣೆ
6ನೇ ವರ್ಷದ ಕೆಸರುಡೊಂಜಿ ದಿನದ ವಿಶೇಷ ಆಕರ್ಷಣೆಯಾಗಿ ತಿಂಗಳಾಡಿ ಬಾಲಯದ ಲೋಹಿತ್ ಬಿ.ಬಿ ಮಾಲಕತ್ವದ ಕಂಬಳದ ಕೋಣಗಳ ವಿಶೇಷ ಆಕರ್ಷಣೆ ಹಾಗೂ ಕೋಣಗಳು ಕೆಸರು ಗದ್ದೆಗೆ ಇಳಿಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.

ವಿವಿಧ ಆಟೋಟ ಸ್ಪರ್ಧೆಗಳು
ನ.19ರಂದು ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಕೆಯ್ಯೂರು, ಅರಿಯಡ್ಕ, ಕೆದಂಬಾಡಿ ಗ್ರಾಮದವರಿಗೆ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾಟ ನಡೆಯಲಿದೆ. ಇದಲ್ಲದೆ ಪುರುಷರಿಗೆ ಮುಕ್ತ ಹಗ್ಗಜಗ್ಗಾಟ ನಡೆಯಲಿದೆ.

ಸಾಧಕರಿಗೆ ಸನ್ಮಾನ
ಸೇನೆಗೆ ಮೂರು ಮಕ್ಕಳನ್ನು ಕಳುಹಿಸಿಕೊಟ್ಟ ಗಿರಿಜಾ ಪಟ್ಟೆ, ರಕ್ತದಾನಿ ಪಿ.ಬಿ ಸುಧಾಕರ ರೈ ಪೆರಾಜೆ, ಕಂಬಳ ಕೋಣಗಳ ಮಾಲಕ ಲೋಹಿತ್ ಬಿ.ಬಿ ಬಾಲಯ ತಿಂಗಳಾಡಿ, ಸಮಾಜ ಸೇವಕ ವಿ.ಜೆ ವಿಖ್ಯಾತ್ ಸುಳ್ಯ, ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟು ದೀಕ್ಷಾ ಎಸ್ ತ್ಯಾಗರಾಜನಗರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯುವಶಕ್ತಿ ಬಳಗದ ಗೌರವಾಧ್ಯಕ್ಷ ಕೆ.ಮೋಹನ್ ರೈ ಓಲೆಮುಂಡೋವು, ಅಧ್ಯಕ್ಷ ರಘುನಾಥ ಗೋಳ್ತಿಲ, ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರು, ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ಗೋಳ್ತಿಲ, ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ, ಕ್ರೀಡಾ ಕಾರ್ಯದರ್ಶಿ ತಿರುಮಲ ಕುಂಬ್ರ, ಜೊತೆ ಕ್ರೀಡಾ ಕಾರ್ಯದರ್ಶಿ ಪ್ರಸಾದ್ ಬಿರ್ವ ಕಾವು, ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಸ್ವಾಮಿನಗರ, ಸಾಂಸ್ಕೃತಿಕ ಜತೆ ಕಾರ್ಯದರ್ಶಿ ಪುರುಷೋತ್ತಮ ಗೋಳ್ತಿಲ, ಪ್ರಧಾನ ಉಪ ಕಾರ್ಯದರ್ಶಿ ಲೋಕೇಶ್ ಸ್ವಾಮಿನಗರ ಹಾಗೂ ಬಳಗದ ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here