ಜೈ ತುಳುನಾಡ್ ಸಂಘಟನೆಯಿಂದ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ತುಳು ಲಿಪಿ ಬೋಧಿಸುವುದಾಗಿ ಮನವಿ

0

ಪುತ್ತೂರು: ಜೈ ತುಳುನಾಡ್ ಸಂಘಟನೆಯಿಂದ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ತುಳು ಲಿಪಿ ಬೋಧನೆ ಬಗ್ಗೆ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕಬಕ, ವಿವೇಕಾನಂದ ಪದವಿ ಪೂರ್ವ ಕಾಲೇಜು ನೆಹರುನಗರ ಪುತ್ತೂರು, ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ನೆಹರುನಗರ ಪುತ್ತೂರು, ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ ಕೆಯ್ಯೂರು, ಕರ್ನಾಟಕ ಪಬ್ಲಿಕ್ ಶಾಲೆ ಪದವಿ ಪೂರ್ವ ವಿಭಾಗ ಕೆಯ್ಯೂರು, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಬೊಳಿಕಳ, ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ ಬೆಳ್ಳಾರೆ, ಕರ್ನಾಟಕ ಪಬ್ಲಿಕ್ ಶಾಲೆ ಪದವಿ ಪೂರ್ವ ವಿಭಾಗ ಬೆಳ್ಳಾರೆ, ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸುಳ್ಯಕ್ಕೆ ಹೋಗಿ ತುಲು ಲಿಪಿ ತರಗತಿ ಬಗ್ಗೆ‌ ಮಾಹಿತಿ ಕೊಟ್ಟು ಶೈಕ್ಷಣಿಕ ವರ್ಷದಲ್ಲಿ ಉಚಿತವಾಗಿ ತುಳು ಲಿಪಿ ಬೋಧಿಸುವುದಾಗಿ ಮನವಿ ಮಾಡಿದರು.

ಈ ಸಂದರ್ಭ ಜೈ ತುಳುನಾಡು ಅಧ್ಯಕ್ಷ ವಿಶು ಶ್ರೀಕೇರ, ಉಪಾಧ್ಯಕ್ಷ ಉದಯ್ ಪೂಂಜ, ಪ್ರಧಾನ ಕಾರ್ಯದರ್ಶಿ ಕಿರಣ್ ತುಲುವೆ, ಸಂಘಟನಾ ಕಾರ್ಯದರ್ಶಿ ಸುಮಂತ್ ಹೆಬ್ರಿ, ಉಪ ಸಂಘಟನಾ ಕಾರ್ಯದರ್ಶಿ ಶೇಖರ್ ಶ್ರೀಗಂಗೆ, ಪ್ರಚಾರ ಸಮಿತಿಯ ಸದಾಶಿವ ಮುದ್ರಾಡಿ, ಸ್ಥಾಪಕ ಸಮಿತಿಯ ಸದಸ್ಯ ರಕ್ಷಿತ್‌ರಾಜ್ ಬಜಾಲ್, ಮಾಜಿ ಉಪಾಧ್ಯಕ್ಷ ಜಗದೀಶ ಕಲ್ಕಳ, ಸದಸ್ಯ ನಾರಾಯಣ ಶೆಟ್ಟಿ, ವಿನಯ್ ರೈ, ನಿಶ್ಚಿತ್ ರಾಮಕುಂಜ, ದಿವಾಕರ್, ಸುಕೇಶ್ ಗೌಡ ಕೆಮ್ಮಾಯಿ, ಚಿತ್ರಾಕ್ಷಿ, ಸುನಿಲ್ ಕುಮಾರ್, ಪವನ್, ರೋಹಿತಾಕ್ಷಿ ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳು ಲಿಪಿ ನಾಮ ಫಲಕ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೆಸರನ್ನು ತುಳು ಲಿಪಿಯಲ್ಲಿ ನಾಮ ಫಲಕ ಅಳವಡಿಸುವ ಕೋರಿಕೆಯನ್ನು ಜೈ ತುಳುನಾಡ್ ಕೂಟ ಮಾಡಿತು. ಈ ಸಂದರ್ಭ ಜೈ ತುಳುನಾಡ್ ಕೂಟದ ಪದಾಧಿಕಾರಿಕಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ತುಳು ಲಿಪಿ ನಾಮಫಲಕ ಉದ್ಘಾಟನೆ
ಜೈ ತುಳುನಾಡ್ ಸಂಘಟನೆಯ ಸದಸ್ಯ ನಾರಾಯಣ ಶೆಟ್ಟಿ ರವರ ಮುಂದಾಲತ್ವದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಉದಯಗಿರಿ ಸಂಪ್ಯ,ಪುತ್ತೂರು ಇಲ್ಲಿ ತುಳು ಲಿಪಿ ನಾಮಫಲಕವನ್ನು ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯ ಅವರ ಆಶೀರ್ವಾದ ಪಡೆದು,ದೇವಲದ ಅರ್ಚಕ ಶ್ರೀವತ್ಸ ಕಾರಂತರು ಉದ್ಘಾಟಿಸಿದರು.

LEAVE A REPLY

Please enter your comment!
Please enter your name here