ನೈತ್ತಾಡಿ ತಿಮ್ಮಪ್ಪ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು: ಇತ್ತೀಚೆಗೆ ನಿಧನರಾದ ಪ್ರಗತಿಪರ ಕೃಷಿಕ ಕೆಮ್ಮಿಂಜೆ ಗ್ರಾಮದ ನೈತ್ತಾಡಿ ನಿವಾಸಿ ತಿಮ್ಮಪ್ಪ ಗೌಡ ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯ ನ.18 ರಂದು ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭ ತಿಮ್ಮಪ್ಪ ಗೌಡ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.


ಮೃತರ ಸಂಬಂಧಿಕರಾದ ಲಿಂಗಪ್ಪ ಗೌಡ ಪನೆಯಡ್ಕ ಕನ್ಯಾನ ಅವರು ನುಡಿನಮನ ಸಲ್ಲಿಸಿದರು .ಗೋವು ಪ್ರೀಯರಾಗಿ, ಸಮಾರಂಭದಲ್ಲಿ ಅಡುಗೆಯ ನೇತೃತ್ವ ವಹಿಸುವ ಮೂಲಕ ಚಿರಪರಿಚಿತರಾದ ತಿಮ್ಮಪ್ಪ ಗೌಡ ಓರ್ವ ಪ್ರಗತಿಪರ ಕೃಷಿಕರಾಗಿದ್ದರು ಎಂದರು. ಬಳಿಕ ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಮೌನ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ತಿಮ್ಮಪ್ಪ ಗೌಡ ಅವರ ಪತ್ನಿ ಪುಷ್ಪಾ ನೈತ್ತಾಡಿ, ಪುತ್ರರಾದ ಸುರೇಶ್, ಲೋಕೇಶ್, ಸೊಸೆಯಂದಿರು, ಮೊಮ್ಮಕ್ಕಳು, ಸಂಬಂಧಿಕರಾದ ಗಣೇಶ್ ಗೌಡ ನೈತ್ತಾಡಿ, ರಾಮಣ್ಣ ಗೌಡ ನೆಲಪ್ಪಾಲು, ಸುಂದರ ಗೌಡ ಪುದ್ಯಂಗ ಕೊಕ್ಕಡ, ಉಮೇಶ್ ನೆಕ್ಕರಾಜೆ ಮತ್ತಿತರ ಸಂಬಂಧಿಕರು, ಹಿತೈಷಿ ವೇದನಾಥ ಸುವರ್ಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here