ನ.27: ಈಶ್ವರಮಂಗಲದಲ್ಲಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ

0

ಪುತ್ತೂರು: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆ ಈಶ್ವರಮಂಗಲ ಹಿರಾ ಟವರ್‌ನಲ್ಲಿ ನ.27ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಐ.ಕೆ.ಮಹಮ್ಮದ್ ಇಕ್ಬಾಲ್ ಎಲಿಮಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


1997ರಲ್ಲಿ ಪ್ರಾರಂಭಗೊಂಡ ನಮ್ಮ ಸಂಸ್ಥೆಯ ಸುದೀರ್ಘ 24 ವರ್ಷ ಗಳನ್ನು ಪೂರೈಸಿ 25 ನೇ ವರ್ಷದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ ಎಂದ ಅವರು ಸಂಘವು ಈಗಾಗಲೇ ಬೆಳ್ಳಾರೆ ಶಾಖೆಯನ್ನು ಆರಂಭಿಸಿ ಉತ್ತಮ ರೀತಿಯಲ್ಲಿ ಪ್ರಗತಿಯನ್ನು ಹೊಂದಿದೆ. ಅದೇ ರೀತಿ ನ.27ರಂದು ಪುತ್ತೂರು ತಾಲೂಕಿನ ಈಶ್ವರಮಂಗಲದ ಹಿರಾ ಟವರ್‌ನಲ್ಲಿ ಸಂಘದ ನೂತನ ಶಾಖೆಯು ಉದ್ಘಾಟನೆಗೊಳ್ಳಲಿದೆ. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ಮೊಬೈಲ್ ಬ್ಯಾಂಕಿಂಗ್‌ಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಅವರು ಸಂಘದ ಗ್ರಾಹಕರಿಗೆ ವಿವಿಧ ಸೌಲಭ್ಯ ವಿತರಣೆ ಮಾಡಲಿದ್ದಾರೆ. ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕಮಾರ್ ಬಾಲ್ಯೊಟ್ಟುರವರು ಚಾಪಾ ಕಾಗದಕ್ಕೆ ಚಾಲನೆ ನೀಡಲಿದ್ದಾರೆ. ನಿರ್ದೇಶಕ ಎಸ್.ಬಿ.ಜಯರಾಮ ರೈ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.


ಪುತ್ತೂರು, ವಿಟ್ಲ, ಉಪ್ಪಿನಗಂಡಿಯಲ್ಲೂ ಅತಿ ಶೀಘ್ರ ಶಾಖೆ ಆರಂಭ:
ಪ್ರಸ್ತುತ ಸಂಘದಲ್ಲಿ 3575 ಮಂದಿ ಸದಸ್ಯರಿದ್ದು, ಸಂಘವು ಸುಮಾರು ರೂ. 50 ಕೋಟಿಯಷ್ಟು ವಾರ್ಷಿಕ ವ್ಯವಹಾರ ಹೊಂದಿ, ರೂ. 7, 03,594 ಲಾಭ ಗಳಿಸಿದೆ. ಸಂಘವು ನಿರಂತರ 2 ವರ್ಷದಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರಿಂದ ಉತ್ತಮ ಸಹಕಾರಿ ಸಂಘ ಸಾಧನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಂಘವು ಎಲ್ಲಾ ಧರ್ಮದವರಲ್ಲೂ ವ್ಯವಹಾರ ನಡೆಸುತ್ತದೆ. ಇತರ ಧರ್ಮದವರು ಸಿ ವರ್ಗದ ಸದಸ್ಯರಾಗಿರುತ್ತಾರೆ ಎಂದ ಅವರು ಈಗಾಗಲೇ ಬೆಳ್ಳಾರೆ ಶಾಖೆ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ದಿನ ಪುತ್ತೂರು, ವಿಟ್ಲ, ಉಪ್ಪಿನಂಡಿಯಲ್ಲೂ ಶಾಖೆಯನ್ನು ತೆರೆಯಲಿದ್ದೇವೆ ಎಂದು ಸಂಘದ ಅಧ್ಯಕ್ಷ ಐ.ಕೆ.ಮುಹಮ್ಮದ್ ಇಕ್ಬಾಲ್ ಎಲಿಮಲೆ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಂ.ಮುಹಿಯುದ್ದೀನ್ ಹಾಜಿ ಫ್ಯಾನ್ಸಿ, ನಿರ್ದೇಶಕರಾದ ಹಸೈನಾರ್ ಎ.ಕೆ.ಕಲ್ಲುಗುಂಡಿ, ಜಾರ್ಜ್ ಡಿ’ಸೋಜ ಕೆನಿಕರಪಳ್ಳ, ಅಮಿನಾ ಎಸ್ ಜಯನಗರ, ಜೂಲಿಯಾ ಕ್ರಾಸ್ತ ಬೀರಮಂಗಳ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಐ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here