ಕೆಯ್ಯೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು,ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ`ಕಲಾ ಸಂಗಮ-2023-24 ನ.21ರಂದು ಕೆಪಿಎಸ್ ಕೆಯ್ಯೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ ಕೆಯ್ಯೂರು ಎ.ಕೆ ಜಯರಾಮ ರೈ ಕೆಯ್ಯೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು ಲೋಕೇಶ್ ಎಸ್ ಆರ್, ಕೆಯ್ಯೂರು ಗ್ರಾ.ಪಂ.ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ, ನಿವೃತ್ತ ಕೆಪಿಎಸ್ ಕೆಯ್ಯೂರು ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ಪಿ, ಪಿ.ಎಂ. ಪೋಷಣ್ ಯೋಜನೆ ಪುತ್ತೂರು ಸಹಾಯ ನಿರ್ದೇಶಕ ವಿಷ್ಣು ಪ್ರಸಾದ್, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ನವೀನ್ ಸ್ಟೀಪನ್ ವೇಗಸ್, ಕೆಪಿಎಸ್ ಕೆಯ್ಯೂರು ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ, ಶ್ರೀ ಕ್ಷೇತ್ರ
ಕೆಯ್ಯೂರು ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚೆನ್ನಪ್ಪ ರೈ ದೇರ್ಲ, ಎನ್ ಎಸ್ ಕಿಲ್ಲೆ ಪ್ರತಿಷ್ಠಾನ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರ ಅಧ್ಯಕ್ಷ ಸುಭಾಷ್ ರೈ ಕಡಮಜಲು, ನಿವೃತ್ತ ಕಂದಾಯ ಇಲಾಖಾಧಿಕಾರಿ ಬಾಲಕೃಷ್ಣ ರೈ ನೆಟ್ಟಾಳ, ಕೆಪಿಎಸ್ ಕೆಯ್ಯೂರು ನಿವೃತ್ತ ಮುಖ್ಯಗುರು ಈಶ್ವರ ಭಟ್ ಎಳ್ಯಡ್ಕ, ನಿವೃತ್ತ ಸರ್ವೆ ಸುಪರ್ ವೈಸರ್ ಬಾಲಕೃಷ್ಣ ಪೂಜಾರಿ ಕೆಂಗುಡೇಲು,ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ಉದ್ಯಮಿ ಅಬ್ದುಲ್ ಹಮೀದ್, ವಿವಿಧ ಸಮಿತಿಯ ಸಂಚಾಲಕ ಶಿವಶ್ರೀ ರಂಜನ್ ರೈ ದೇರ್ಲ, ಹನೀಪ್ ಕೆ.ಎಂ ಕೆಯ್ಯೂರು, ಆನಂದ ರೈ ದೇವಿನಗರ, ತಾರಾನಾಥ ಬೊಳಿಯಾಲ, ರಾಕೇಶ್ ಬಲ್ಲಾಳ್, ಅರ್ಚನಾ ರಾವ್ ಎ.ಎಸ್, ಧರಣಿ ಸಿ.ಬಿ, ಚರಣ್ ಕುಮಾರ್ ಸಣಂಗಳ, ಮತ್ತು ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಪಿಎಸ್ ಕೆಯ್ಯೂರು ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಸ್ವಾಗತಿಸಿ, ಕೆಪಿಎಸ್ ಪ್ರಾಥಮಿಕ ವಿಭಾಗ ಪದವೀಧರೇತರ ಮುಖ್ಯಗುರು ಬಾಬು. ಎಂ, ವಂದಿಸಿ, ಜೆಸ್ಸಿ ಪಿ.ವಿ, ನಳಿನಿ.ಡಿ, ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು.
ಸಮಗ್ರ ಪ್ರಶಸ್ತಿ
ಕಿರಿಯ ಪ್ರಾಥಮಿಕ ವಿಭಾಗದ ಸಮಗ್ರ ಪ್ರಶಸ್ತಿ: ಪ್ರಥಮ-ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ, ದ್ವಿತೀಯ ಸ್ಥಾನ-ಸ.ಮಾ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು,
ಹಿರಿಯ ಪ್ರಾಥಮಿಕ ವಿಭಾಗ: ಪ್ರಥಮ-ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು, ಕಡಬ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.