ವಿಟ್ಲ: ಇಲ್ಲಿನ ಜೋಗಿ ಮಠಕ್ಕೆ ಕರ್ನಾಟಕ ಧಾರ್ಮಿಕ ಪರಿಷತ್ ನ ಸದಸ್ಯೆ ಮಲ್ಲಿಕಾ ಪಕ್ಕಳರವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಧಾರ್ಮಿಕ ದತ್ತಿ ಇಲಾಖೆಯಿಂದ ಮಠಕ್ಕೆ ತಮ್ಮಿಂದಾದಷ್ಟು ಸಹಾಯವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.
ಜೋಗಿ ಮಠದ ಮಠಾಧೀಶ ರಾಜಗುರು ಶ್ರೀ ಶ್ರದ್ದಾನಾಥ ಜೀ, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಯಶವಂತ ವಿಟ್ಲ, ಕಾರ್ಯಾಧ್ಯಕ್ಷ ಡಾ| ಗೀತಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಳ್ಯೂರು, ಕೊಶಾಧಿಕಾರಿ ಸತೀಶ್ ಕುಮಾರ್ ಕೂಟತ್ತಜೆ. ಕಾಮಗಾರಿ ಉಸ್ಥುವಾರಿ ಸುಂದರ ಪೂಜಾರಿ,
ವಿಟ್ಲ ನಗರ ಪಂಚಾಯತ್ ಸದಸ್ಯೆ ಪದ್ಮಿನಿ, ಜೋಗಿಮಠ ಸ0ಘಟನಾ ಕಾರ್ಯದರ್ಶಿ ಶಿವರಾಮ ಜೋಗಿ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ರಾಜಗುರುಗಳು ಮಲ್ಲಿಕಾ ಪಕ್ಕಳರವರನ್ನು ಶಾಲು ಹೊದಿಸಿ ಗೌರವಿಸಿದರು.