ಸಂಸ್ಥೆಯಿಂದ ರೈತಾಪಿ ಜನರಿಗೆ ಪ್ರಯೋಜನ ಸಿಗುವಂತಾಗಲಿ : ಶ್ರೀ ಮಹಾಮಂಡಲೇಶ್ವರ ಸ್ವಾಮಿ ನಿತ್ಯಾನಂದ ಸರಸ್ವತಿ
ಪುತ್ತೂರು: ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರಂಭಿಸಿದ ಈ ಪಾಂಬಾರು ಟ್ರೇಡರ್ಸ್ ಸಂಸ್ಥೆ ಮುಂದಿನ ದಿನಗಳಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿ ಸಂಸ್ಥೆಯಾಗಿ ಬೆಳಗಲಿ, ರೈತಾಪಿ ಜನರಿಗೆ ಉತ್ತಮ ಪ್ರಯೋಜನ ಸಂಸ್ಥೆಯಿಂದ ಸಿಗಲಿ ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ನಿತ್ಯಾನಂದ ಸರಸ್ವತಿ ಓಂ ಶ್ರೀ ಮಠ ಮಂಗಳೂರು ಇವರು ಹೇಳಿದರು. ಅವರು ನ.25 ರಂದು ಪೆರ್ಲಂಪಾಡಿಯ ಸನ್ನಿಧಿ ಸಂಕೀರ್ಣದಲ್ಲಿ ಮೆ| ಪಾಂಬಾರು ಟ್ರೇಡರ್ಸ್ ಅನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಯ ಮೂಲಕ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಧಾರಣೆ ಸಿಗುವಂತಾಗಲಿ, ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಸ್ವಾಮೀಜಿ ಶುಭಾಶೀರ್ವಾದ ಮಾಡಿದರು.
ಅಖಿಲ ಭಾರತೀಯ ಸಂತ ಸಮಿತಿಯ ಸಹ ಅಧ್ಯಕ್ಷ ಮಾತಾ ಶ್ರೀ ಓಂ ಶ್ರೀ ಶಿವ ಜ್ಞಾನಮಯಿ ಸರಸ್ವತೀ ಓಂ ಶ್ರೀ ಮಠರವರು ಶುಭಾಶೀರ್ವಾದ ಮಾಡಿದರು. ಬೆಳಗ್ಗೆ ಕೊರ್ಬಂಡ್ಕ ಶಿವರಾಮ ಹೊಳ್ಳರವರು ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸ್ವಾಮೀಜಿಯವರಿಗೆ ಪಾಂಬಾರು ಟ್ರೇಡರ್ಸ್ನ ಪಾಲುದಾರ ಪ್ರದೀಪ್ ರೈ ಪಾಂಬಾರುರವರು ಫಲಪುಷ್ಪ, ಶಾಲು ನೀಡಿ ಗೌರವಿಸಿದರು. ಮಾತಾ ಶಿವ ಜ್ಞಾನಮಯಿಯವರಿಗೆ ಪಾಂಬಾರು ಟ್ರೇಡರ್ಸ್ನ ಪಾಲುದಾರ ಪ್ರದೀಪ್ ಕುಮಾರ್ ರೈಯವರ ಪತ್ನಿ ದೀಕ್ಷಿತಾ ಪಿ.ರೈಯವರು ಫಲಪುಷ್ಪ, ಶಾಲು ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಕೆಮ್ಮಾರ ಗಂಗಾಧರ ಗೌಡ, ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ರಮಣ ಕೆ.ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ, ಉಪ ಕಾರ್ಯನಿರ್ವಹಣಾಧಿಕಾರಿ ಗಿರಿಜಾ, ಎಪಿಎಂಸಿ ಸದಸ್ಯ ತೀರ್ಥಾನಂದ ದುಗ್ಗಳ, ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಸದಸ್ಯರುಗಳಾದ ಪವನ್ ಡಿ.ಜಿ, ಬಾಲಕೃಷ್ಣ ಕೆಮ್ಮಾರ, ಮಾಜಿ ಸದಸ್ಯ ಶಿವರಾಮ ಭಟ್ ಬೀರ್ಣಕಜೆ, ಜಿಪಂ ಮಾಜಿ ಸದಸ್ಯೆ ರಾಜೀವಿ ಆರ್.ರೈ, ತಾಪಂ ಮಾಜಿ ಸದಸ್ಯ ರಾಮ ಪಾಂಬಾರು, ಬೆಳ್ಳಾರೆ ಗ್ರಾಪಂ ಸದಸ್ಯರಾದ ಅನಿಲ್ ರೈ ಪುಡ್ಕಜೆ, ರೈತ ಮಿತ್ರ ಕೂಟದ ಅಧ್ಯಕ್ಷ ಮುರಳೀಧರ ಎಸ್.ಪಿ, ಕಟ್ಟಡ ಮಾಲಕ ಗುಡ್ಡಪ್ಪ ಗೌಡ ಪೆರ್ಲಂಪಾಡಿ, ಕೊಳ್ತಿಗೆ ಹಾ.ಉತ್ಪಾದಕರ ಸಂಘದ ಮಾಜಿ ಉಪಾಧ್ಯಕ್ಷ ವಿಶ್ವನಾಥ ರೈ, ಕೆವಿಜಿಯ ಡಾ.ದೇವಿಪ್ರಸಾದ್, ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಸತೀಶ್ ನೂಜಿ, ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯಶೋಧರ ಗೌಡ ಪಾಂಬಾರು, ಕೊಳ್ತಿಗೆ ಹಾ.ಉ.ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಪೂಜಾರಿ ಚಾಲೆಪಡ್ಪು, ಗ್ರಾಪಂ ಮಾಜಿ ಸದಸ್ಯ ಲಿಂಗಪ್ಪ ಪೂಜಾರಿ ಪಾಂಬಾರು, ಕಾವು ಲಯನ್ಸ್ ಕ್ಲಬ್ನ ಕಾರ್ಯದರ್ಶಿ ದೇವಣ್ಣ ರೈ ಮುದರ್ಪಲ್ಲ, ಮನೋಜ್ ರೈ ಕಾವು, ಉದ್ಯಮಿಗಳಾದ ಹರಿಪ್ರಸಾದ್ ಪೆರ್ಲಂಪಾಡಿ, ಸುಖೀತ್ ರೈ ಪಾಲ್ತಾಡು, ಉಮ್ಮರ್ ನೀಟಡ್ಕ, ವೀರಪ್ಪ ಗೌಡ ಪೆರ್ಲಂಪಾಡಿ, ಕೊಳ್ತಿಗೆ ಗ್ರಾಪಂ ಮತ್ತು ಕೊಳ್ತಿಗೆ ಸಿಎ ಬ್ಯಾಂಕ್ ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಗಣ್ಯರು, ಸಾರ್ವಜನಿಕರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಪಾಲುದಾರರಾದ ಪ್ರದೀಪ್ ಕುಮಾರ್ ರೈ ಪಾಂಬಾರು ಮತ್ತು ದೀಕ್ಷಿತಾ ಪಿ.ರೈ, ಪುತ್ರ ಪ್ರಧಾನ್ ರೈ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ಸಹಕಾರ ಕೋರಿದರು. ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ ಸ್ವಾಗತಿಸಿ, ವಂದಿಸಿದರು.
ಪೆರ್ಲಂಪಾಡಿಯ ಸನ್ನಿಧಿ ಸಂಕೀರ್ಣದಲ್ಲಿ ಆರಂಭವಾದ ಮೆ| ಪಾಂಬಾರು ಟ್ರೇಡರ್ಸ್ನಲ್ಲಿ ಕಾಳು ಮೆಣಸು, ಅಡಿಕೆ, ಕೊಕ್ಕೋ, ತೆಂಗು ಇತ್ಯಾದಿಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಆರಂಭವಾದ ಈ ಸಂಸ್ಥೆಗೆ ಗ್ರಾಹಕರು ಸಹಕಾರ ನೀಡುವಂತೆ ಪಾಲುದಾರರು ವಿನಂತಿಸಿಕೊಂಡಿದ್ದಾರೆ.