ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ 55ನೇ ವರ್ಷದ ವಾರ್ಷಿಕ ಸಂಭ್ರಮ ಶ್ರೀ ಆಂಜನೇಯ 55 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನ.25ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಹಿರಿಯ ಭಾಗವತ ಪದ್ಮನಾಭ ಭಟ್ ಬಡೆಕ್ಕಿಲ ಹಾಗೂ ಹಿರಿಯ ಅರ್ಥದಾರಿಗಳಾದ ಜಬ್ಬಾರ್ ಸಮೋ ಮತ್ತು ಶ್ರೀಧರ್ ರಾವ್ ಕುಂಬ್ಳೆ ಇವರಿಗೆ “ಶ್ರೀ ಆಂಜನೇಯ- 55ರ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಹಾಗೂ ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.
ತಾಳಮದ್ದಳೆ:
ಬಳಿಕ ಮಂತ್ರಾಲಯದ ವಠಾರದಲ್ಲಿ ಪಾಕ್ಷಿಕ ತಾಳಮದ್ದಳೆಯ ಕೂಟವು ಪಾರ್ತಿಸುಬ್ಬ ವಿರಚಿತ “ಯಜ್ಞ ಸಂರಕ್ಷಣೆ”ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ತಾರಾನಾಥ ಸವಣೂರು, ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ದಶರಥ), ದುಗ್ಗಪ್ಪ ನಡುಗಲ್ಲು (ವಸಿಷ್ಠ ), ಗುಡ್ಡಪ್ಪ ಬಲ್ಯ (ವಿಶ್ವಾಮಿತ್ರ), ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಅಚ್ಯುತ ಪಾಂಗಣ್ಣಾಯ (ಶ್ರೀ ರಾಮ), ಚಂದ್ರಶೇಖರ ಭಟ್ ಬಡೆಕ್ಕಿಲ (ತಾಟಕಿ), ಹರಿಣಾಕ್ಷಿ, ಜೆ.ಶೆಟ್ಟಿ(ಮಾರೀಚ), ಶಾರದಾ ಅರಸ್ (ಸುಬಾಹು) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.