ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಮತ್ತು ಗೃಹ ಉಪಯೋಗಿ ವಸ್ತುಗಳ ಮಳಿಗೆ ಪುತ್ತೂರು ಸೆಂಟರ್‌ನಲ್ಲಿರುವ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಗೆಲ್ಲುವ 18ನೇ ಬಂಪರ್ ಡ್ರಾ ನ.26ರಂದು ಗ್ರಾಹಕರ ಸಮ್ಮುಖದಲ್ಲಿ ನಡೆಯಿತು. ಅಕ್ಷಯ ಗ್ರೂಪ್‌ನ ಜಯಂತ ನಡುಬೈಲು ಬಂಪರ್ ಡ್ರಾ ನಡೆಸಿಕೊಟ್ಟರು. ಸರ್ವೆ ನೇರೋಳ್ತಡ್ಕದ ಮಹಮ್ಮದ್ ಸಿರಾಜುದ್ದೀನ್(ಎಡಿ 3096) ಟಿವಿಎಸ್ ರೆಡಿಯಾನ್ ಬೈಕ್ ಬಂಪರ್ ಡ್ರಾ ವಿಜೇತರಾದರು.
ಬಂಪರ್ ಡ್ರಾ, ನಡೆಸಿದ ಜಯಂತ ನಡುಬೈಲು ಮಾತನಾಡಿ, ಇಲ್ಲಿ ಕೂಪನ್ ಮೂಲಕ ಬಡವರಿಗೆ ಬಹುಮಾನ ಗೆಲ್ಲುವ ಅವಕಾಶ ನೀಡುತ್ತಿದೆ. ಗ್ರಾಹಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಡ್ರಾ ನಡೆಸಲಾಗಿದೆ. ವಿಶ್ವಸಾರ್ಹ ಸೇವೆಯೊಂದಿಗೆ ಕಳೆದ 24 ವರ್ಷಗಳಿಂದ ಜಿಲ್ಲೆಯಲ್ಲಿ ಹೆಸರು ಪಡೆದಿದೆ. ನಗುಮೊಗದಿಂದ ಗ್ರಾಹಕರನ್ನು ಸೆಳೆಯುತ್ತಿದೆ. ಗುಣ ಮಟ್ಟದ ಉತ್ಪನ್ನಗಳ ಮಾರಾಟ ಹಾಗೂ ಉತ್ತಮ ಸೇವೆ ನೀಡುತ್ತಿದೆ. ಲಕ್ಕಿ ಕೂಪನ್‌ನಲ್ಲಿ ಬಡವರಿಗೆ ಬಹುಮಾನ ಬಂದಿರುವುದು ಸಂತಷ ತಂದಿದೆ ಎಂದರು.
ರಂಗ ನಟ ಸುಂದರ ರೈ ಮಂದಾರ ಮಾತನಾಡಿ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ನೀಡುತ್ತಿರುವ ಶೇಟ್ ಎಲೆಕ್ಟ್ರಾನಿಕ್ಸ್ ದ.ಕ ಜಿಲ್ಲೆಯಲ್ಲಿ ಹೆಸರು ಪಡೆದಿದೆ. ನಗುಮೊಗದ ಸೇವೆ ನೀಡುತ್ತಿರುವುದಲ್ಲದೆ ಹಬ್ಬಗಳ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ ಎಂದರು.
ಸಂಸ್ಥೆಯ ಮ್ಹಾಲಕ ರೂಪೇಶ್ ಶೇಟ್‌ರವರು ಮಾತನಾಡಿ, ಗ್ರಾಹಕರ ನಿರಂತರ ಸಹಕಾರ, ಪ್ರೋತ್ಸಾಹದಿಂದ ಲಕ್ಕಿ ಕೂಪನ್ ಡ್ರಾ. ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೀಗ 19ನೇ ಡ್ರಾ ನಡೆದಿದ್ದು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಮೊಟ್ಟೆತ್ತಡ್ಕ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಕೂರ್ನಡ್ಕ, ನೋಟರಿ, ನ್ಯಾಯವಾದಿ ಸೆಲ್ವಿಯಾ ಡಿ ಸೋಜ ಮಾತನಾಡಿ ಶುಭಹಾರೈಸಿದರು. ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಪುರಸಭಾ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಬಪ್ಪಳಿಗೆ, ನಿವೃತ್ತ ಡಿಎಫ್ಓ ದಿವಾಕರ ಕೆ.ಪಿ., ನವೀನ್ ಶೆಟ್ಟಿ, ದಸ್ತಾವೇಜು ಬರಹಗಾರ ಬಾಲಚಂದ್ರ ಸೊರಕೆ ಹಾಗೂ ಮಳಿಗೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಮಿತ್ ಕಾರ್ಯಕ್ರಮ ನಿರೂಪಿಸಿದರು.