ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಧರ್ಮದರ್ಶಿಗಳ ಚಿಂತನಾ ಸಭೆ

0

ಅತ್ಯುತ್ತಮ ಹಿಂದೂ ಸಮಾಜ ನಿರ್ಮಾಣದೆಡೆಗೆ ಸಾಗಲಿ-ಮನೋಹರ್ ಮಠದ್

ಪುತ್ತೂರು : ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ, ಪುತ್ತೂರು ಜಿಲ್ಲಾ ದೇವಾಲಯಗಳ ಆಡಳಿತ ಸಮಿತಿಯ ಧರ್ಮದರ್ಶಿಗಳ ಚಿಂತನಾ ಸಭೆ ‘ಗುಡಿ ಜನರ ಜೀವ ನಾಡಿ’ ಪರಿಕಲ್ಪನೆಯಡಿಯಲ್ಲಿ ಪುತ್ತೂರು ನಗರ, ಗ್ರಾಮೀಣ ಭಾಗ ಸಹಿತ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ ದೇವಾಲಯಗಳ ಆಡಳಿತ ಧರ್ಮದರ್ಶಿಗಳ ಸಂವರ್ಧನಾ ಸಮಿತಿ ಸಭೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನ.28 ರಂದು ನಡೆಯಿತು.


ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಮಾತನಾಡಿ, ರಾಜ್ಯದಲ್ಲಿ 29600 ಗ್ರಾಮಗಳಿದ್ದು, 2.5 ಲಕ್ಷ ದೇವಾಲಯಗಳಿವೆ. ಮುಜುರಾಯಿ ಇಲಾಖೆ ಅಧಿನದಲ್ಲಿ ಎ,ಬಿ ,ಸಿ ಗ್ರೇಡ್ ಮೂಲಕ 34 ಸಾವಿರದ 541 ದೇವಾಲಯಗಳು ಪ್ರತ್ಯೇಕ ಇವೆಯೆಂದು ಮಾಹಿತಿ ನೀಡಿದರು.
2.5 ಲಕ್ಷ ದೇವಾಲಯಗಳು ಪ್ರಮುಖ 5 ಕಾರಣಗಳಿಂದ ನಿರ್ಮಾಣಗೊಂಡಿದೆ ಎಂದು ತಿಳಿಸಿದ ಅವರು ಉತ್ತರ ಭಾರತಕ್ಕಿಂತಲೂ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ದೇವಾಲಯಗಳು ಮುಜರಾಯಿ ಇಲಾಖೆಯ ಅಧೀನಕ್ಕೊಳಪಟ್ಟು ಕಾರ್ಯನಿರ್ವಹಿಸುತ್ತಿವೆ. ಈ ಮುಜರಾಯಿ ಇಲಾಖಾ ಅಧೀನದಲ್ಲಿರುವ ದೇವಾಲಯಗಳಿಂದ ಕರ್ನಾಟಕದಲ್ಲೇ ಸುಮಾರು 72 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, 50 ಕೋಟಿಯಷ್ಟು ದೇವಾಲಯದ ಹಣ ರಹೀಮನ ಪಾಲಾಗುತ್ತಿದೆ, 10 ಕೋಟಿಯಷ್ಟು ಚರ್ಚ್‌ಗಳ ಪಾಲಿಗೆ ಸೇರುತ್ತಿವೆ. ಇವಕ್ಕೆಲ್ಲಾ ಮೂಲ ಕಾರಣವೇ ಸರಕಾರ. ಇದಕ್ಕಾಗಿಯೇ ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಯ ಅಡಿಯಲ್ಲಿ ನೋಂದಾಯಿಸಿರುವುದು ಎಂದು ಆರೋಪಿಸಿದರು. ಹಿಂದೂ ಸಮಾಜವು ಶ್ರದ್ಧೆ, ಭಕ್ತಿ, ವಿದ್ಯೆ, ಸಂಸ್ಕಾರ, ಏಕತೆ ಹಾಗೂ ಸಾಮಾಜಿಕ ಕಳಕಳಿಯ ಕೇಂದ್ರವಾಗಿದೆ. ಇಂತಹ ರೀತಿಯ ಸಮಿತಿಗಳೂ ದೇವಾಲಯಗಳ ಮುಖೇನ ರಚನೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದ ಅವರು, ಇದೀಗ ರಚನೆಯಾಗಿರುವ ಸಂವರ್ಧನಾ ಸಮಿತಿ ದೇವಾಲಯಗಳಲ್ಲಿ ಯಾವುದೇ ರೀತಿಯಲ್ಲೂ ಆರ್ಥಿಕ ವಿಚಾರ, ಪೂಜಾ ಪದ್ಧತಿ, ಸಂಪ್ರದಾಯಗಳ ವಿಚಾರಗಳಲ್ಲಿ ಕೈ ಹಾಕುವುದಿಲ್ಲ, ಎಲ್ಲಾ ದೇವಾಲಯಗಳು ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡು, ಅತ್ಯುತ್ತಮ ಹಿಂದೂ ಸಮಾಜ ನಿರ್ಮಾಣದೆಡೆಗೆ ಹೆಜ್ಜೆಯಿಟ್ಟು, ಸಾಗಲಿಯೆಂದು ಹೇಳಿದರು.


ಅತ್ಯುತ್ತಮ ಮಾರ್ಗದರ್ಶನ ನೀಡುವ ಕೇಂದ್ರಗಳಾಗಲಿ-ಕೇಶವ ಪ್ರಸಾದ್:
ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎಲ್ಲಾ ದೇವಾಲಯಗಳ ಹಳೆಯ ಹಾಗೂ ಹೊಸ ಸಮಿತಿಗಳ ನಡುವೆ ಇರುವಂಥ ಸಂವಹನ ಕೊರತೆಗಳನ್ನು ನೀಗಿಸೋ ಕಾರ್ಯ ಪ್ರಥಮವಾಗಿ ನಡೆಯಬೇಕು. ಎಲ್ಲಾ ದೇವಾಲಯಗಳು ಸ್ವಾಯತ್ತತೆ ಕಡೆ ಸಾಗಬೇಕೆಂಬ ಕೂಗು ಕೂಡ ಇದೆ. ಏನೇ ಆದರೂ ದೇವಾಲಯಗಳು ಕೂಡಾ ಅತ್ಯುತ್ತಮ ಮಾರ್ಗದರ್ಶನ ನೀಡುವ ದೊಡ್ಡ ಕೇಂದ್ರಗಳಾಗಿ ಬೆಳಗಲಿಯೆಂದು ಹಾರೈಸಿದರು.


ವೇದಿಕೆಯಲ್ಲಿ ರಾಷ್ಷ್ರೀಯ ಸ್ವಂಯಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಇದರ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘು ಮಂಗಳೂರು ವಿಭಾಗದ ಸಹ ಕಾರ್ಯವಾಹ್ ಸುಭಾಶ್ಚಂದ್ರ ಕಳಂಜ ಇದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಐತ್ತಪ್ಪ ನಾಯ್ಕ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಪ್ರಸನ್ನ ದರ್ಬೆ ಅತಿಥಿಗಳನ್ಮು ಸ್ವಾಗತಿಸಿದರು. ಅರ್ಚಕ ವೃಂದದಿಂದ ವೇದಘೋಷ ಹಾಗೂ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.


ಭಾರತಾಂಬೆಗೆ ಪುಷ್ಪಾರ್ಚನೆ ನಡೆದ ಬಳಿಕ ಕಾರ್ಯಕ್ರಮದ ನಡುವೆ ಪುಟಾಣಿಗಳಿಂದ ಕುಣಿತ ಭಜನೆ ನಡೆಯಿತು. ವೇದಿಕೆಯ ಮುಂಭಾಗದಲ್ಲಿ ಅಳವಡಿಸಿದ್ದ ಪರದೆ ಮೂಲಕ ದೇವಾಲಯಗಳ ಕಿರುಚಿತ್ರ ಪ್ರದರ್ಶನಗೊಂಡಿತು. ನಂತರ ಆಯಾ ತಾಲೂಕಿನ ಎಲ್ಲಾ ದೇವಾಲಯಗಳ ಧರ್ಮದರ್ಶಿಗಳ ಬೈಠಕ್ ಕಾರ್ಯ ನಡೆಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮ್‌ದಾಸ್ ಗೌಡ ಸ್ವಾಗತಿಸಿ, ಕಾಯರ್ತ್ತೋಡಿ ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ಕುಸುಮಾಧರ ನಿರೂಪಿಸಿ, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಪನಾಗೊಂಡಿತು.

LEAVE A REPLY

Please enter your comment!
Please enter your name here