ಪುತ್ತೂರು: ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ನೇಮೋತ್ಸವ ನಡೆಯುವುದರ ಮೂಲಕ ವರ್ಷಾವಧಿ ಜಾತ್ರೋತ್ಸವ ಸಂಪನ್ನಗೊಂಡಿತು.
ನ.28ರಂದು ರಾತ್ರಿ ದೇವರ ಮಹಾಪೂಜೆ, ಶ್ರೀಜಠಾಧಾರಿ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದು ರಾತ್ರಿ 1ರಿಂದ ಜಠಾಧಾರಿ ದೈವದ ಮಹಿಮೆ ನಡೆಯಿತು.ನ.29ರಂದು ಬೆಳಿಗ್ಗೆ 9ರಿಂದ ಧೂಮಾವತಿ ದೈವದ ನೇಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಹುಲಿಭೂತ ದೈವದ ನೇಮ ನಡೆಯಿತು.
ಅನ್ನಸಂತರ್ಪಣೆ:
ಜಾತ್ರೋತ್ಸವದ ಪ್ರಯುಕ್ತ ನ.26ರಿಂದ 28ರವರೆಗೆ ಪ್ರತೀದಿನ ಅನ್ನಸಂತರ್ಪಣೆ ನಡೆಯಿತು. ಸಂಕಲ್ಪಸಹಿತ ಅನ್ನದಾನ ಸೇವೆಗೆ ಅವಕಾಶವಿತ್ತು. ಸಾವಿರಾರು ಮಂದಿ ಅನ್ನದಾನ ಸ್ವೀಕರಿಸಿದರು.
ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಳಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಹಾಗೂ ಆಡಳಿತ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡರು.
ಮಠಂದೂರು, ಪುತ್ತಿಲ ಭೇಟಿ
ನ.28ರಂದು ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ನ.29ರಂದು ಸಂಜೆ ಹುಲಿಭೂತ ನೇಮೋತ್ಸವ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಜಗನ್ನೀವಾಸ ರಾವ್, ರಾಜೇಶ್ ಬನ್ನೂರು ಸಹಿತ ವಿವಿಧ ಮುಖಂಡರು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು.