ಪುತ್ತೂರು:ಶಾಲಾ ಶಿಕ್ಷಣ ಇಲಾಖೆ ದಿನಗಳ ಕಾಲ ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ 17ರ ವಯೋಮಾನದ ಬಾಲಕ-ಬಾಲಕಿಯರ ವಿಭಾಗದ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ 15 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಬಾಲಕರ ವಿಭಾಗದಲ್ಲಿ ಶಾಟ್‌ಪುಟ್ ಹಾಗೂ ಜಾವೆಲಿನ್‌ನಲ್ಲಿ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ನಿಪೇಕ್ಷ್, ಓಟದ ನಡಿಗೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲಾ ಪ್ರೀತಂ ಕೆ., ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿಲಾಸ್ ಗೌಡ, 100 ಮೀ., 200 ಮೀ, ರಿಲೇ ಓಟದಲ್ಲಿ ಮೊರಾರ್ಜಿ ದೇಸಾಯಿ ಪ್ರೌಢಶಾಲಾ ಪೃಥ್ವಿರಾಜ್ ಆರ್.ಜೆ., 400 ಮೀ.800ಮೀ. ಓಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಚಿತ್ ಪಿ.ಕೆ., ಹರ್ಡಲ್ಸ್‌ನಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಾತ್ವಿಕ್ ಆರ್., ಹೈ ಜಂಪ್‌ನಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲಾ ಯಶ್ವಿತ್ ಡಿ.ಪಿ. ಸ್ಪರ್ಧಿಸಲಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 100 ಮೀ. ರಿಲೇ ಓಟದಲ್ಲಿ ಸೈಂಟ್ ಜಾರ್ಜ್ ಪ್ರೌಢಶಾಲಾ ಬೆಲ್ಸಿಟಾ ಜಾಸ್ಮಿನ್, ಓಟದ ನಡಿಗೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲಾ ಚೈತನ್ಯ, 800ಮೀ.,1500 ಮೀ ಮತ್ತು 3000 ಮೀ. ಓಟದಲ್ಲಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಚರಿಷ್ಮಾ, 400ಮೀ. ಓಟದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲಾ ಡಿಂಪಲ್ ಶೆಟ್ಟಿ, ಜಾವೆಲಿನ್‌ನಲ್ಲಿ ದರ್ಬೆ ಬೆಥನಿ ಪ್ರೌಢಶಾಲಾ ರಿಯಾ ಜಿ. ರೈ, ಜಾಂಗ್ ಜಂಪ್, ಹರ್ಡಲ್ಸ್‌ನಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಮೃದ್ಧಿ ಶೆಟ್ಟಿ, ಹರ್ಡಲ್ಸ್‌ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲಾ ಶ್ರೀವರ್ಣ ಪಿ.ಡಿ, ಮತ್ತು ಶಾಟ್‌ಪುಟ್‌ನಲ್ಲಿ ಪಟ್ಟೆ ಪ್ರತಿಭಾ ಪ್ರೌಢಶಾಲಾ ತನುಶ್ರೀ ರೈ ಸ್ಪರ್ಧಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.